
ಸಕಲೇಶಪುರ ಬೇಲೂರು ರಾಜ್ಯ ಹೆದ್ದಾರಿಯ ಆಚಂಗಿ ಸಮೀಪದ ಹಂದಿ ಮಾಂಸದ ಅಂಗಡಿಯ ಮುಂಭಾಗದಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ಈ ಜಾಗದಲ್ಲಿ ಹಲವಾರು ಬೈಕ್ ಗಳು ಅಪಘಾತವಾಗುತ್ತಿವೆ. ಕೂಡಲೆ ಇದನ್ನು ಸರಿಪಡಿಸದೆ ಇದ್ದರೆ ಕರವೇ ಸಂಘಟನೆ ವತಿಯಿಂದ ಲೋಕೋಪಯೋಗಿ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ತಿಳಿಸಿದ್ದಾರೆ.
ಹಲವಾರು ದಿನಗಳಿಂದ ಆಚಂಗಿಯ ಹಂದಿಮಾಂಸದ ಅಂಗಡಿ ಮುಂಭಾಗದಲ್ಲಿ ರಾಜ್ಯ ಹೆದ್ದಾರಿ ಗುಂಡಿ ಬಿದ್ದಿದ್ದು, ಅನೇಕ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗುತ್ತಿಲ್ಲ. ಈ ಜಾಗದಲ್ಲಿ ಬೈಕ್ ಸವಾರರು ಪದೇ ಪದೇ ಅಪಘಾತಕ್ಕೆ ಗುರಿಯಾಗುತ್ತಿದ್ದಾರೆ ಬೈಕ್ ಅಪಘಾತದಲ್ಲಿ ಪ್ರಾಣಪಾಯವಾದರೆ ಲೋಕೋಪಯೋಗಿ ಇಲಾಖೆಯವರೇ ನೇರವಾಗಿ ಹೊಣೆ ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದವರು.
ಕೂಡಲೇ ಈ ರಸ್ತೆಯನ್ನು ಗುಂಡಿ ಮುಚ್ಚಿ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಒತ್ತಾಯಿಸಿದ್ದಾರೆ.
