ಸಕಲೇಶಪುರ : ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷರ ಸ್ಥಾನ ತೆರವಾದ ಕಾರಣ 14/11/2025 ಶುಕ್ರವಾರದಂದು ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿಯಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಗಂಗಾಧರ್ ಅವರ ನೇತತ್ವದಲ್ಲಿ ಚುನಾವಣೆ ನಡೆಯಿತು.

ಒಪ್ಪಂದದ ಪ್ರಕಾರ ಮಾಜಿ ಉಪಾಧ್ಯಕ್ಷರಾದ ಸತೀಶ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ 12 ಸದಸ್ಯರುಗಳ ಒಪ್ಪಂದದ ಪ್ರಕಾರ ರಮೇಶ್ ಅವರನ್ನು ಅವಿರೋಧವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ರೇಖಾ ಗೋಪಿನಾಥ್ , ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ , ಕಾರ್ಯದರ್ಶಿ ಜಯಪ್ರಕಾಶ್ , ಮಾಜಿ ಅಧ್ಯಕ್ಷರಾದ ರಾಮಕೃಷ್ಣ, ಸದಸ್ಯರುಗಳಾದ ಜೈ ಶಂಕರ್ , ರಾಕೇಶ್ , ಸತೀಶ್, ಚಾರ್ಲ್ಸ್ , ವನಜಾಕ್ಷಿ , ಶ್ರೀನಿವಾಸ್, ಪುಷ್ಪ , ಮೋಹಿನಿ, ಗಿರಿಜಮ್ಮ, ಸವಿತಾ ಜಗದೀಶ್, ಪಂಚಾಯಿತಿ ಸಿಬ್ಬಂದಿಗಳಾದ ಕರ ವಸೂಲಿಗರ ವೀರಭದ್ರ , ಅವಿನಾಶ್ , ವಿ ಆರ್ ಡಬ್ಲ್ಯೂ ಅರ್ಜುನ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *