ಸಕಲೇಶಪುರ : ಪಟ್ಟಣದ ರೋಟರಿ ಶಾಲೆಯಲ್ಲಿ ಇಂದು ಮಕ್ಕಳ ದಿನಾಚರಣೆಯನ್ನು ಸಂತಸ ಹಾಗೂ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ವಿಜಯಶಂಕರ್ ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಗಿಡಕ್ಕೆ ನೀರು ಹಾಕುವ ಮೂಲಕ ನೆರವೇರಿಸಿದರು.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ವಿಜಯ್ ಶಂಕರ್ ಮಾತನಾಡಿ ಇಂದು 68ನೇ ಮಕ್ಕಳ ದಿನಾಚರಣೆ ನಮ್ಮ ಶಾಲೆಯಲ್ಲಿ ಆಚರಿಸುತ್ತಿದ್ದು ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು ಅವರ ಜಯಂತಿಯ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು ನೆಹರು ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಹಾಗಾಗಿ ಅವರ ಜಯಂತಿ ಎಂದು ಪ್ರತಿವರ್ಷ ನವಂಬರ್ 14ರ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದ ಅವರು ನೆಹರು ಅವರು ಮಕ್ಕಳಿಗೆ ಅಚ್ಚುಮೆಚ್ಚಿನ ಚಾಚಾ ಎಂದೆ ಕರೆಯಲ್ಪಡಲಾಗುತ್ತದೆ ಮಕ್ಕಳು ಶಿಕ್ಷಕರಿಗೆ ಒಳ್ಳೆಯ ವಿದ್ಯಾರ್ಥಿಗಳಾಗಿ ಕೆಟ್ಟವರ ಸಹವಾಸ ಮಾಡದೆ ದೇಶದ ಸತ್ಪ್ಪೃಜೆಗಳಾಗಿ ಹುಟ್ಟಿದ ಊರಿಗೆ ತಾವು ಓದಿದ ಶಾಲೆಗೆ ಹಾಗೂ ದೇಶಕ್ಕೆ ಮತ್ತು ಮನೆಯವರಿಗೆಕೀರ್ತಿ ತರುವಂತಹ ಮಕ್ಕಳಾಗಿ ಸಾಧನೆ ಮಾಡಿ ಎಂದು ಹಾರೈಸಿದರು.

ರೋಟರಿ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ ನೆಹರು ಅವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚಿನ ಪ್ರೀತಿ ಅವರ ನೆನಪಿಗಾಗಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ವಿಜಿತ್ ಮಾತನಾಡಿ ಮಕ್ಕಳ ದಿನಾಚರಣೆ ಎಂದರೆ ಮಕ್ಕಳಿಗೆ ಸಂಭ್ರಮ ಹಾಗೆ ನಿಮ್ಮಲ್ಲಿ ಒಂದು ಗುರಿ ಇರಬೇಕು ಗುರಿ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ರೋಟರಿ ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ತಿಲಕ್ ಶೆಟ್ಟಿ, ರೋಟರಿ ಶಾಲೆಯ ಪ್ರಾಂಶುಪಾಲ ಸುಮಂತ್, ಮುಖ್ಯೋಪಾದಾಯ ರುದ್ರೇಶ್, ನೋಟರಿ ಶಾಲೆಯ ಮಾಸ್ಟರ್ ನಂದನ್, ದಾನವಿ, ಆಯುಷ್, ಚೈತನ್ಯ ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *