
ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಗೆ ಭೇಟಿ ನೀಡಿ ವೃಕ್ಷಮಾತೆ ಶ್ರೀ ಸಾಲುಮರದ ತಿಮ್ಮಕ್ಕ ಅವರ ಅಂತಿಮ ದರ್ಶನ ಪಡೆದ ಸಕಲೇಶಪುರ ಶಾಸಕ ಮತ್ತು ರಾಜ್ಯ ಎಸ್ಸಿ ಯುವ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು ಅಂತಿಮ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಅವರು ನಮ್ಮನ್ನೆಲ್ಲ ಅಗಲಿರುವ ಸಾಲು ಮರದ ತಿಮ್ಮಕ್ಕ ಹಾಸನ ಜಿಲ್ಲೆ ಹೆಮ್ಮೆಯ ಪುತ್ರಿಯಾಗಿದ್ದು ಅದೇ ಜಿಲ್ಲೆಯವನಾಗಿರುವ ನಮಗೆ ಅವರ ಬದುಕು ಮಾದರಿ ರಾಜ್ಯ ಸರ್ಕಾರ ಸಾಲುಮರದ ತಿಮ್ಮಕ್ಕ ಜೀವನ ಸಾಧನೆ ಪ್ರಕೃತಿ ಪ್ರೀತಿ ಶಾಲಾ ಪಾಠ ಪುಸ್ತಕಗಳಲ್ಲಿ ಪ್ರಕಟಿಸಿ ಮುಂದಿನ ವಿದ್ಯಾರ್ಥಿಗಳು ಪೀಳಿಗೆಯಲ್ಲಿ ಮಹಾನ್ ಮಹಾತಾಯಿ ಸಾಧನೆ ಬಗ್ಗೆ ತಿಳಿಯಬೇಕು ಅದೇ ರೀತಿ ಸಾಲು ಮರದ ತಿಮ್ಮಕ್ಕನ. ಪ್ರತಿಮೆಯನ್ನು ಜಿಲೆಯಲ್ಲಿ ಸ್ಥಾಪಿಸಬೇಕೆಂದು ತಿಳಿಸಿದರು
ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ರಾಜ್ಯ ಎಸ್.ಸಿ ಮೋರ್ಚಾ ಕಾರ್ಯಾಲಯ ಕಾರ್ಯದರ್ಶಿಗಳಾದ ಶ್ರೀ ಪ್ರಶಾಂತ್ ಕುಮಾರ್ ರವರು ಇನ್ನಿತರ ಪ್ರಮುಖರು ಜೊತೆಗಿದ್ದರು.
