
ಸಕಲೇಶಪುರ: ದಿವಂಗತ ಭಾರತ ರತ್ನ, ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆಯನ್ನು ಬುಧವಾರ ಪಟ್ಟಣದ ಇಂದಿರಾ ಕ್ಯಾಂಟೀನ್ ಬಳಿ ಗೌರವಪೂರ್ಣವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಾಗೂ ಸಾರ್ವಜನಿಕರು ಹಾಜರಾಗುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷಭಾವ ತುಂಬಿದರು. ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪಾ ರ್ಚನೆಮಾಡಿ, ಸಿಹಿ ಹಂಚಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಮೊಹಮ್ಮದ್ ಹನೀಫ್, ಇಂದಿರಾ ಗಾಂಧಿಯವರ ತ್ಯಾಗ, ಧೈರ್ಯ ಮತ್ತು ದೇಶಾಭಿವೃದ್ದಿಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಿಕೊಳ್ಳುವ ದಿನ ಇದು. ಅವರಂತಹ ನಾಯಕರು ದೇಶವನ್ನು ಮಾತ್ರವಲ್ಲದೆ, ಮುಂದಿನ ಪೀಳಿಗೆಯನ್ನೂ ಪ್ರೇರೇಪಿಸುತ್ತಾರೆ ಎಂದು ಹೇಳಿದರು.
ಯುವಜನತೆ ನಡುವೆ ಪ್ರಭಾವಶಾಲಿ ನಾಯಕನಾಗಿ ಪರಿಚಿತರಾದ ಆನೆಮಹಲ್ ಹಸೆನಾರ್ ಮಾತನಾಡಿ,“ಇಂದಿರಾ ಗಾಂಧಿಯವರ ಆಡಳಿತ ಶೈಲಿ, ಸಾಮಾನ್ಯರ ಪರ ಹೋರಾಟ ಮತ್ತು ಕಠಿಣ ನಿರ್ಧಾರಗಳ ಕಾರಣ ಅವರ ಹೆಸರು ಸದಾ ಬದುಕುಳಿಯುತ್ತದೆ. ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತವೆ,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷೆ ಸಾಯಿರಾ ಬಾನು,ಕಾಂಗ್ರೆಸ್ ಮುಖಂಡರು ಹಾರೀಸ್,ಗ್ಯಾರಂಟಿ ಸಮಿತಿಯ ಸದಸ್ಯ ವೆಂಕಟೇಶ್,ಜಾಬೀರ್, ಜಾಕೀರ್ ಶಾಮಿಯಾನ, ಲತೀಫ್, ಇಬ್ರಾಹಿಂ ಆನೆಮಹಲ್, ಮುನ್ನ ಎಫ್.ಎಂ,ಪುರಸಭೆ ನಾಮಿನಿ ಸದಸ್ಯೆ ಬಲ್ಕಿಸ್ ರಾಣಿ, ಶಾನು, ಹನೀಫ್, ಮಾದೇವಿ,ಸುನಂದಾ, ಮಿನಾಕ್ಷಿ,ಸೇರಿದಂತೆ ಹಲವಾರು ನೇತೃತ್ವ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
