
ಹಾಸನದ ಬಿ ಕಾಟೀಹಳ್ಳಿಯಲ್ಲಿರು ವಸಂತಜೋಸೆಫರ ಕಾಲೇಜಿನಲ್ಲಿ 2025-26 ನೇಸಾಲಿನ ವಾರ್ಷಿಕಕ್ರೀಡಾಕೂಟ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆಮುಖ್ಯಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಪ್ಯಾರಾಒಲಿಂಪಿಕ್ ವಾಲಿಬಾಲ್ ಕ್ರೀಡಾಪಟು ಹಾಗೂನಮ್ಮ ಕಾಲೇಜಿನ ಹಳೆಯ ವಿದ್ಯಾಥಿ೯ ಇನ್ಫಾನ್ ನಿಶಾಂತ್ ಮತ್ತು ಅಂತಾರಾಷ್ಟ್ರೀಯ ಅಥ್ಲೆಟಿಕ್ಕ್ರೀಡಾಪಟು ಬಾಲಕೃಷ್ಣ ಗಿಡಕ್ಕೆನೀರು ಎರೆಯುವುದರ ಮೂಲಕಚಾಲನೆ ನೀಡಿದರು.
ನಿಶಾಂತ್ ಅವರು ತಮ್ಮಉದ್ಘಾಟನಾ ಭಾಷಣದಲ್ಲಿವಿದ್ಯಾರ್ಥಿಗಳಿಗೆ ಶಿಸ್ತು ಸಮಯಪಾಲನೆ ಬಹಳಮುಖ್ಯ ಓದಿನಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡರೆ ಉತ್ತಮಭವಿಷ್ಯಇದೆ ಎಂದರು.
ಮತ್ತೋರ್ವ ಅತಿಥಿಯಾದ ಬಾಲಕೃಷ್ಣ ಅವರು ಮಾತನಾಡಿ ,ಗುರಿಮುಟ್ಟಬೇಕಾದರೆ ಮನಸ್ಸಿನ ಏಕಾಗ್ರತೆ, ಪ್ರತೀದಿನ ಕ್ರೀಡಾಭ್ಯಾಸಮಾಡಬೇಕು. ಛಲಬಿಡದ ಹೋರಾಟದ ಜೊತೆಗೆ ತಾಳ್ಮೆಅಗತ್ಯ.ಆಗ ಮಾತ್ರ ಗೆಲುವು ಸಾಧ್ಯ. “ಸತತಪ್ರಯತ್ನವೇ ಸಾಧನೆಯ ರಹಸ್ಯವಾಗಿದೆ”.ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಪ್ರಾಂಶುಪಾಲರಾದಡಾ.ರೆ.ಫಾ.ಮ್ಯಾಕ್ಸಿಂಡಯಾಸ್ಎಸ್.ಜೆ. ಮಾತನಾಡಿ ವಿದ್ಯಾರ್ಥಿಗಳು ಸೋಲುಗೆಲುವನ್ನು ಸಮಾನವಾಗಿಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕುಎಂದು ತಿಳಿಸಿ ಕ್ರೀಡಾಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯಮುಖ್ಯಸ್ಥರಾದ.ಫಾದರ್ಲಿಯೋಪೆರೇರಾಎಸ್.ಜೆ.ಅವರು ತಮ್ಮಅಧ್ಯಕ್ಷೀಯ ಭಾಷಣದಲ್ಲಿ ಕ್ರೀಡೆಯು ಮಾನಸಿಕ ಮತ್ತು ದೈಹಿಕಬೆಳವಣಿಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಓದಿನಜೊತೆಗೆ ಇತರಚಟುವಟಿಕೆಗಳಲ್ಲಿ ಸಕ್ರಿಯವಾಗಿಭಾಗವಹಿಸಿದರೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದ ಸಂಚಾಲಕರಾದ ಕೀರ್ತಿ.ಎನ್.ಆರ್.ದೈಹಿಕ ಶಿಕ್ಷಣ ನಿರ್ದೇಶಕರು.ಉಪಪ್ರಾಂಶುಪಾಲ ಪ್ರದೀಪ್ ಕುಮಾರ್. ಕ್ಯಾಂಪಸ್ ಆನಿಮೇಟರ್ರೆ. ಫಾ.ಓಲ್ವಿನ್ವೆಗಸ್, ವಿತ್ತ ಅಧಿಕಾರಿ.ಫಾ.ರಯಾನ್ಪೆರೇರಾ, ಕ್ರೀಡಾಕಾರ್ಯದರ್ಶಿ ಸಾತ್ವಿಕ್ ಮ ತ್ತು ಕುಮಾರಿ ಪ್ರಾರ್ಥನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮತ್ತುನಮ್ಮಕಾಲೇಜಿನ 800 ವಿದ್ಯಾಥಿ೯ಗಳು (ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ)ಮತ್ತುಸಂತಜೋಸೆಫರ ಎನ್.ಸಿ.ಸಿವಿದ್ಯಾಥಿಗಳು ಹಾಗೂ ಆಂಗ್ಲಮಾಧ್ಯಮಶಾಲೆಯ ವಿದ್ಯಾಥಿ೯ಗಳು ಬ್ಯಾಂಡ್ ಸೆಟ್ ನೊಂದಿಗೆ ಮಾಚ್೯ಫಾಸ್ಟ್ನಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳೆಲ್ಲರೂ ರಾಷ್ಟ್ರಗೀತೆಹಾಡುವುದರ ಮೂಲಕ ಧ್ವಜವಂದನೆಸಲ್ಲಿಸಿದರು.
ವಿದ್ಯಾರ್ಥಿತೇಜಸ್ ಪ್ರಾರ್ಥಿಸಿದರೆ .ಆಶಿತಾಡಿಸೋಜಾ ಎಲ್ಲರನ್ನೂಸ್ವಾಗತಿಸಿದರು.
ಕು.ಧೃತಿಎಲ್ಲರನ್ನೂವಂದಿಸಿದರು.
