
ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸಕಲೇಶಪುರ ತಾಲೂಕಿನ ಹಲಸುಲಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆವರಣ ಸ್ವಚ್ಛತಾ ಕಾರ್ಯ ಹಾಗೂ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಸಲಾಯಿತು.
ಹಣ್ಣಿನ ಗಿಡ ನಾಟಿ ಹಾಗೂ ಆವರಣ ಸ್ವಚ್ಛತಾ ಕಾರ್ಯಕ್ಕೆ ಸಕಲೇಶಪುರ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸಹಕರಿಸಿದರು.
ಹಾಸನ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ ನವೀನ್ ಚಂದ್ರ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಗಿರೀಶ್ ಮಂಜುನಾಥ್, ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ರಾಜೇಶ ಎಂ ಕಾನರ್ಪ, ವಿಪತ್ತು ನಿರ್ವಹಣಾ ಘಟಕದ ಮಾಷ್ಟರ್ ಮಧುವರನ್, ಮಂಜುನಾಥ್,ರಾಮು, ರಮೇಶ್, ಭಾಸ್ಕರಾಚಾರ್ಯ, ಹರೀಶ್, ಸಂದೇಶ್, ಗುರುಪ್ರಕಾಶ್, ದಿವ್ಯ, ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ, ತಾರಾ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಚಿರಂತ್, ಶಿವಾನಂದ, ಪರಮೇಶ್, ಮಂಜುಳಾ, ಆರ್ಶಿಯಾ, ರೂಪ, ಗೀತಾ, ಸರೋಜಾ, ಸನ್ನಿಧಿ, ಸೌಜನ್ಯ , ಭಾನು, ಶಶಿಕುಮಾರ್, ಅಜಯ್, ಸೌಜನ್ಯ ,ವಿದ್ಯಾ ಲಯನ್ಸ್ ಕಾರ್ಯದರ್ಶಿ ಬಸವರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂತೋಷ್, ಮಾಜಿ ಅಧ್ಯಕ್ಷ ಆನಂದ್, ಮುಖ್ಯ ಶಿಕ್ಷಕರಾದ ಕೆ.ಎ. ಶಶಿ, ಶಿಲ್ಪ ಶ್ರೀ, ಗೌರಮ್ಮ, ಅನುರಾಧ, ಕಾವ್ಯ ಹಾಗೂ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




