ಬೇಲೂರು : ಸುಮಾರು 15 ದಿನಗಳಿಂದ 50ಕ್ಕೂ ಹೆಚ್ಚು ಕಾಡಾನೆಗಳು ಕಣಗುಪ್ಪೆ ಗ್ರಾಮದಲ್ಲಿ ಬೀಡು ಬಿಟ್ಟಿದ್ದು ರೈತರ ಬತ್ತದ ಗದ್ದೆಗಳು, ಕಾಫಿ ತೋಟ,ಅಡಿಕೆ ತೋಟಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದು ರೈತರ ಗೋಳನ್ನು ಕೇಳುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲಗೊಂಡಿದೆ.

ನಮ್ಮ ಗ್ರಾಮಗಳ ಸುತ್ತಮುತ್ತಲ ರೈತರು ಬೆಳೆದ ಬತ್ತ, ಬಾಳೆ ಹಣ್ಣು ಕಬ್ಬು, ಕಾಫಿ, ಕಾಳುಮೆಣಸು ಬೆಳೆಗಳು ಪದೇ ಪದೇ ಆನೆಗಳ ದಾಳಿಯಿಂದ ಸಂಪೂರ್ಣವಾಗಿ ನಾಶವಾಗುತ್ತಿವೆ ಮತ್ತು ಜೀವನೋಪಾಯಕ್ಕೆ ಸಂಕಷ್ಟ ಎದುರಾಗಿದೆ ಗ್ರಾಮಸ್ಥರು ನಿರಂತರ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ .ಸರ್ಕಾರ ಮತ್ತು ಅರಣ್ಯ ಇಲಾಖೆ ನಿರ್ಲಕ್ಷದಿಂದಾಗಿ ಅನಿವಾರ್ಯವಾಗಿ ನಾವು ಬೇಲೂರು- ಅರೇಹಳ್ಳಿ ರಸ್ತೆ ತಡೆ ನಡೆಸಲು ನಿರ್ಧರಿಸಿದ್ದೇವೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರುವಂತೆ ಪಟ್ಟು ಹಿಡಿದು ಕುಳಿತ ಹೋರಾಟಗಾರರು ತಕ್ಷಣವೇ ಆನೆಗಳನ್ನು ಸುರಕ್ಷಿತವಾಗಿ ಕಾಡಿನೊಳಗೆ ಅಟ್ಟಲು ಶಾಶ್ವತ ಪರಿಹಾರ ಕ್ರಮಗಳನ್ನು ಗಟ್ಟಿಮುಟ್ಟಾದ ತಡೆಗೋಡೆ ರೈಲು ಹಳಿ ಬೇಲಿ ಮುಂತಾದವುಗಳನ್ನು ಅಳವಡಿಸಬೇಕು ಆನೆಗಳ ದಾಳಿಯಿಂದ ಬೆಳೆ ಕಳೆದುಕೊಂಡಿರುವ ಎಲ್ಲಾ ರೈತರಿಗೆ ಸರಿಯಾದ ಮತ್ತು ತ್ವರಿತ ಪರಿಹಾರ ಧನವನ್ನು ತಕ್ಷಣ ಬಿಡುಗಡೆ ಮಾಡುವುದು ಗ್ರಾಮಗಳ ಪ್ರದೇಶದಲ್ಲಿ ಅರಣ್ಯ ಇಲಾಖೆ ಗಸ್ತು ಹೆಚ್ಚಿಸುವುದು ಈ ಬಗ್ಗೆ ಅರಣ್ಯಾಧಿಕಾರಿಗಳು ಗಮನ ಹರಿಸಬೇಕು ಇಲ್ಲದ್ದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಸರ್ಕಾರಕ್ಕೆಎಚ್ಚರಿಸುತ್ತಿದ್ದೇವೆ.

ಗ್ರಾಮಸ್ಥರಾದ ತಾಲೂಕು ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷರಾದ ಕೆ ಜಿ ಕುಮಾರ್, ತಾಲೂಕು ಕಾಫಿ ಬೆಳೆಗಾರರ ಅಧ್ಯಕ್ಷರಾದ ಅದ್ದೂರಿ ಕುಮಾರ್, ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೀರಭದ್ರಶೆಟ್ಟಿ , ಅರೇಹಳ್ಳಿ ಕಾಫಿ ಬೆಳೆಗಾರರ ಅಧ್ಯಕ್ಷರಾದ ಬಸವರಾಜು, ವಿವಿಧ ರೈತ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಗಳು, ತಾಲೂಕು ಮತ್ತು ಹೋಬಳಿ ಕಾಫಿ ಬೆಳೆಗಾರರ ಸದಸ್ಯರುಗಳು, ರೈತರುಗಳು ಮತ್ತು ಬೆಳ್ಳವಾರ, ದೋಲನಮನೆ, ಚಿಕ್ಕ ಹಸಡೆ, ಹಿರೆಹಸಡೆ, ಕಣಗುಪ್ಪೆ, ಅನುಘಟ್ಟ ಗ್ರಾಮಗಳ‌ ಕಾಫಿ ಬೆಳೆಗಾರರು ಇನ್ನೂ ಮುಂತಾದ ಗ್ರಾಮಸ್ಥರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *