
ಸಕಲೇಶಪುರ : ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥಾಪನ ದಿನದ ಪ್ರಯುಕ್ತ ಸಕಲೇಶಪುರ ತಾಲೂಕಿನಲ್ಲಿ ಹ್ಯೂಮನ್ ರೈಟ್ಸ್ ಡಿಫೆನ್ಸ್ ಆರ್ಗನೈಸೇಶನ್ ಅವರ ವತಿಯಿಂದ ಹಾಸನ ಜಿಲ್ಲಾ ಹಾಗೂ ಸಕಲೇಶಪುರ ತಾಲೂಕಿನ ಘಟಕದ ವತಿಯಿಂದ ಸಕಲೇಶಪುರದ ಬಾಳೆಗದ್ದೆಯ ಹೇಮಾವತಿ ನಗರದ ಹೇಮಾವತಿ ಪಾರ್ಕಿನಲ್ಲಿ ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯ ಎಂಬ ಸಂದೇಶದೊಂದಿಗೆ ಗಿಡ ನೆಡುವುದರ ಮುಖಾಂತರ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನು ಸಕಲೇಶಪುರ ನಗರ ಠಾಣೆಯ ವೃತ ನಿರೀಕ್ಷಕರಾದ ವಿ ಸಿ ವನರಾಜ್ ಸರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಾದ ಮಹೇಶ್ವರಪ್ಪ ಇವರ ಸಮ್ಮುಖದಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಹಾಸನ ಜಿಲ್ಲಾಧ್ಯಕ್ಷರಾದ ಜೀವನ್ ಗೌಡ. ಸಕಲೇಶಪುರ ತಾಲೂಕ್ ಅಧ್ಯಕ್ಷರಾದ ವಿಜಯಕುಮಾರ್. ತಾಲೂಕು ಕಾನೂನು ಸಲಹೆಗಾರರಾದಂತಹ ಪ್ರದೀಪ್ ಹಾಗೂ ಹಾಸನ ಜಿಲ್ಲಾ ಹಾಗೂ ತಾಲೂಕಿನ ಘಟಕದ ಪದಾಧಿಕಾರಿಗಳಾದಂತಹ ಎಂಪಿ ಮಹೇಶ್, ಬಾಲರಾಜ್, ಸಂತೋಷ್, ಸ್ಮಿಥನ್ ,ಎಂಪಿ ಮಂಜು,ಸುಧಾ, ಪ್ರಸನ್ನ, ಭಾಷಾ, ಹನೀಫ್, ಮಲ್ಲೇಶ್, ಆಲುವಳ್ಳಿ ಮಹೇಶ್, ಕೇಬಲ್ ಉಮೇಶ್, ರವಿ, ಆಟೋ ಮಹೇಶ್, ಮಣಿ,ರಾಮಗಟ್ಟಿ, ಹಾಗೂ ಮುಂತಾದ ಪದಾಧಿಕಾರಿಗಳ ಇದ್ದರು





