ಸಕಲೇಶಪುರ : ತಾಲ್ಲೂಕಿನ ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಶ್ರೀ ಅದಿನಾಗ ಬ್ರಹ್ಮ ಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ, ಶ್ರೀ ಚೌಕಾರ್ ಮಂತ್ರವಾದಿ ಗುಳಿಗ ದೈವದ ಕ್ಷೇತ್ರದ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು.

ಬಾಳ್ಳುಪೇಟೆ ಜೆಪಿ ನಗರ,ಅಯೋಧ್ಯ ನಗರ ಹಾಗೂ ಓಂ ನಗರದ ನಿವಾಸಿಗಳು ಆರಾಧ್ಯ ದೈವ ಕೊರಗಜ್ಜ ದೇವಸ್ಥಾನದ ಭೂಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಧರ್ಮಪತ್ನಿ ಪ್ರತಿಭಾ ಮಂಜುನಾಥ್, ದೇವಾಲಯಗಳು ಜನತೆಯ ಶ್ರದ್ಧಾ ಭಕ್ತಿ ಜೊತೆಗೆ ಮನಶಾಂತಿಗೆ ಪೂರಕವಾದ ಕೇಂದ್ರಗಳಾಗಿವೆ. ಈ ದಿಸೆಯಲ್ಲಿ ಜೆಪಿ ನಗರದಲ್ಲಿ ಪುನ ನಿರ್ಮಾಣಗೊಳ್ಳುತ್ತಿರುವ ಕೊರಗಜ್ಜ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿರುವುದು ಸಂತಸ ತಂದಿದೆ. ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡು ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗಲಿ ಎಂದು ಆಶೀಸಿದ ಅವರು ಕೊರಗಜ್ಜ ದೇವರು ಜನತೆಗೆ ಸುಖ ಶಾಂತಿಯನ್ನು ಕರುಣಿಸಲಿ. ಗ್ರಾಮದ ಜನತೆಯ ಯಾವುದೇ ದುಃಖ ದುಮ್ಮಾನಗಳಿಗೆ ಎಂದಿಗೂ ಶಾಸಕರು ಜೊತೆಯಾಗಿರುತ್ತಾರೆ ಎಂದು ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಜಿಲ್ಲಾ ಮೊಗೇರ ಸಂಘದ ಕಾರ್ಯದರ್ಶಿ, ದೇವಸ್ಥಾನ ಅರ್ಚಕ ಕುಮಾರ್, ದೇವಸ್ಥಾನದ ಅಧ್ಯಕ್ಷ ಅಣ್ಣು ಮೇಸ್ತ್ರಿ, ಉಪಾಧ್ಯಕ್ಷ ಸೀನಾ ಮೇಸ್ತ್ರಿ, ಮುಖಂಡರಾದ ಚಂದ್ರಪ್ಪ, ಜೆ.ಪಿ ಮಂಜು, ಬಸಪ್ಪಣ್ಣ, ಉದಯ ಶೆಟ್ಟಿ ಬಿಜೆಪಿ ಮುಖಂಡರಾದ ಮೆಣಸಮಕ್ಕಿ ಶಿವಕುಮಾರ್, ವಿರೂಪಾಕ್ಷ, ರವಿ, ಅಣ್ಣಪ್ಪ ಓಂ ನಗರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *