:ಸಕಲೇಶಪುರ : ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ನಿರಂತರ ಯೋಗ ಕೇಂದ್ರ ಹಾಗೂ ಕುನಿಗನಹಳ್ಳಿ ನಿರಂತರ ಯೋಗ ಕೇಂದ್ರದ ವತಿಯಿಂದ ಯೋಗ, ಧ್ಯಾನ ಮತ್ತು ದೇಶಿ ಚಿಕಿತ್ಸಾ ಶಿಬಿರವನ್ನು  ಹಮ್ಮಿಕೊಳ್ಳಲಾಗಿದೆ.

ಸ್ವಾಸ್ಥ್ಯ ಜೀವನ ಮಾರ್ಗ ಯೋಗ ಪ್ರತಿಷ್ಠಾನ ನಾಗಮಂಗಲ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 14-12-2025 ರಿಂದ 04-1-2026 ರವರೆಗೂ ಖ್ಯಾತ ಯೋಗ ಗುರುಗಳಾದ ಲಕ್ಷಣ್ ಜಿ.ರವರ ಮಾರ್ಗದರ್ಶನದಲ್ಲಿ ಗ್ರಾಮದ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ಪ್ರತಿದಿನ ಬೆಳಿಗ್ಗೆ 05:15 ರಿಂದ 06:45 ವರೆಗೆ ನಡೆಯಲಿದೆ ಎಂದು ನಿರಂತರ ಯೋಗ ಕೇಂದ್ರ ಬಾಳ್ಳುಪೇಟೆ ಹಾಗೂ ಕುನಿಗನಹಳ್ಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಯೋಗ ಶಿಬಿರದಲ್ಲಿ ಮಂಡಿ ನೋವು, ಸೊಂಟ ನೋವು, ಬೆನ್ನು ನೋವು ಗ್ಯಾಸ್ಟಿಕ್ ಬಿ ಪಿ ಶುಗರ್, ಬೊಜ್ಜು ಮೈಗ್ರೇನ್ ಮುಟ್ಟಿನ ತೊಂದರೆ ಅಲರ್ಜಿ ಉಸಿರಾಟದ ತೊಂದರೆ ಜೀರ್ಣಕ್ರಿಯೆ ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *