ಬೇಲೂರು : ತಾಲೂಕಿನ ಅರೇಹಳ್ಳಿ ಪಟ್ಟಣ ವ್ಯಾಪ್ತಿಯ ಉಲ್ಲಾಸ್ ನಗರದ ಜಗನಾಥ್ ಶೆಟ್ಟಿ ಎಂಬುವರ ಕಾಫಿ ಕಣದಲ್ಲಿ ಕಳೆದ ಭಾನುವಾರ ಲಕ್ಷಾಂತರ ಮೌಲ್ಯದ ಕಾಫಿಯನ್ನು ಸುಮಾರು ನಾಲ್ಕೈದು ಜನರಿದ್ದ ಖದೀಮರ ಗುಂಪು ದೋಚಿ ಪರಾರಿಯಾಗಿದ್ದರು, ಈ ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಕಾಫಿ ಬೆಳೆಗಾರರ ಸಂಘವು ಪೊಲೀಸರಲ್ಲಿ ಮನವಿ ಮಾಡಿದ್ದರು , ಇದಾದ ಬೆನ್ನಲ್ಲೇ ಕಳೆದ ಬುಧವಾರ ಮುಂಜಾನೆ ಸುಮಾರು 4.30ರ ವೇಳೆಯಲ್ಲಿ ಅದೇ ಖದೀಮರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದು ಅಡ್ಡ ಬಂದ ಮಾಲೀಕರ ಮೇಲೆ ಬ್ಯಾಟ್ ಹಾಗು ಕಬ್ಬಿಣದ ರಾಡ್ ಬಳಸಿ ಮಾರ*ಣಾಂತಿಕೆ ಹ*ಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಬಂದೂಕು ಹಾಗು ಕಾಫಿಯನ್ನು ದೋಚುವ ಮೂಲಕ ದುಷ್ಕೃತ್ಯ ಎಸಗಿದ್ದರು.

ಘಟನೆ ವರದಿಯಾದ ಬೆನ್ನಲೆ ಕಾಫಿ ಬೆಳೆಗಾರರ ಸಂಘ ಸೇರಿದಂತೆ ಗ್ರಾಮದ ಹಲವಾರು ಮುಖಂಡರು ಕೃತ್ಯವನ್ನು ಖಂಡಿಸಿ ತಪಿಸ್ಥಸ್ತರನ್ನು ಕೂಡಲೇ ಬಂಧಿಸಿ ಪಟ್ಟಣವನ್ನು ಸುಸ್ಥಿತಿಯಲ್ಲಿಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ಹೇರಿದ್ದರು. ಘಟನೆ ಸಂಬಂಧ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಿ ಖದೀಮರ ಸುಳಿವು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದಾದ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರು, ಪೊಲೀಸರು ವಶಪಡೆದ ಆರೋಪಿಗಳನ್ನು ಸುಮಾರು ಇಪ್ಪತ್ತು ವರ್ಷಗಳ ಆಸುಪಾಸಿನ ಸ್ಥಳೀಯ ನಿವಾಸಿಗಳಾದ ಸೈಯದ್ ಮುಬಾರಕ್, ಶಹೀಬ್ ಅಹ್ಮದ್ ,ಅಬ್ದುಲ್ ಅಜೀಜ್, ಸಾಗರ್ , ಪ್ರಜ್ವಲ್ ಎಂದು ಗುರುತಿಸಲಾಗಿದ್ದು ಕಾಫಿಯನ್ನು ಖರೀದಿ ಮಾಡಿದ ಆರೋಪಿ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ, ಸದ್ಯ ಇವರನ್ನು ಜೈಲುಗಟ್ಟುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಕ್ಕೆ ನಿಟ್ಟುಸಿರು ಬಿಟ್ಟ ಕಾಫಿ ಬೆಳೆಗಾರರ ಸಂಘ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಪರ್ಯಾಸವೆಂದರೆ ಇಂದು ಸ್ಥಳ ಮಹಾಜರ್ ಗಾಗಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆ ತಂದ ಕ್ಷಣ ಇಬ್ಬರನ್ನು ಕಂಡೊಡನೆ ಜಗನ್ನಾಥ್ ಶೆಟ್ಟಿರವರ ಪತ್ನಿ ಆಳುತ್ತಾ ಚಿರಾಡುವ ದೃಶ್ಯ ಎಲ್ಲರನ್ನು ಮನಮುಟ್ಟುವಂತಿತ್ತು ಕಾರಣ ಆರೋಪಿಗಳ ಸ್ಥಾನದಲ್ಲಿರುವ ಇಬ್ಬರು ದಿನನಿತ್ಯ ಕಾಣಿಸಿಕೊಳ್ಳುವ ಅದೇ ಬೀದಿಯವರಾಗಿದ್ದರು ಹಾಗೂ ಅವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಇದ್ದುದ್ದಲ್ಲದೆ ಉಂಡ ಮನೆಗೆ ದ್ರೋಹ ಎಸಗಿದ್ದಾರೆ ಎಂಬ ವೇದನೆಯನ್ನು ಹೊರಹಾಕುತ್ತಿದ್ದರು.

ಈ ವೇಳೆ ಸಿ.ಪಿ.ಐ ಜಗದೀಶ್, ಪಿ.ಎಸ್.ಐ ಸುರೇಶ್, ಎಸ್.ಜಿ ಪಾಟೀಲ್ , ಪೊಲೀಸ್ ಸಿಬ್ಬಂದಿಗಳಾದ ಸಂಶುದ್ದೀನ್, ಸುಪ್ರೀತ್ ,ಅವಿನಾಶ್, ನಂದೀಶ್ ,ಶಶಿಕುಮಾರ್ ,ಮಂಜುನಾಥ್, ಹೇಮಕಾಂತ್ ಸೇರಿದಂತೆ ಇನ್ನಿತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *