ಸಕಲೇಶಪುರ :ಎಲ್ಲಿ ಮೌಡ್ಯತೆ ಇರುತ್ತದೆಯೋ ಅಲ್ಲಿ ಮಕ್ಕಳ ಬೆಳವಣಿಗೆ ಸಾಧ್ಯವಿಲ್ಲ ಎಂದು ಉಪನ್ಯಾಸಕ ಡಾ. ಹಂಪನಹಳ್ಳಿ ತಿಮ್ಮಗೌಡ ಹೇಳಿದರು.

ಪಟ್ಟಣದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ 45 ನೇ ವರ್ಷದ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಶಿಕ್ಸಕರು ಕಾಮದೇನು ಇದ್ದ ಹಾಗೆ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಸಮಾಜದಲ್ಲಿ ಶಿಕ್ಷಕರಿಗೆ ಬೇರೆಲ್ಲಾ ರಿಗಿಂತ ಉನ್ನತವಾದ ಸ್ಥಾನಮಾನವಿದೆ. ಶಿಕ್ಷಕರು ಸ್ವಂತ ಮಕ್ಕಳಿಗಿಂತ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರೀತಿ ಮಾಡಬೇಕು. ಶಿಕ್ಷಕರು, ಪಾಲಕರು, ಮಗುವಿನ ನಡುವೆ ಉತ್ತಮ ಸಂಬಂಧ ಇರಬೇಕು. ಮಕ್ಕಳನ್ನು ಮೌಡ್ಯತೆಯಲ್ಲಿ ಬೆಳೆಸದೆ ವೈಜ್ಞಾನಿಕತೆಯಲ್ಲಿ ಬೆಳೆಸಬೇಕು.

ಇತ್ತೀಚೆಗೆ ಜಾತಿ, ಧರ್ಮಗಳ ಆಧಾರದ ಮೇಲೆ ಸಮಾಜ ವಿಭಜನೆಯಾಗುತ್ತಿದ್ದು ಮಕ್ಕಳಲ್ಲಿ ಜಾತಿ ಧರ್ಮಗಳ ವಿಷ ಬೀಜವನ್ನು ಬಿತ್ತದೆ ಮಕ್ಕಳನ್ನು ವಿಶ್ವ ಮಾನವರಾಗಿ ಬೆಳೆಸಬೇಕು. ಇಂದು ಚಂದ್ರ ಲೋಕಕ್ಕೆ ಹೋದರು ಸಹ ಪಕ್ಕದ ಮನೆಗೆ ಹೋಗುವ ಮನಸ್ಸು ಇರುವುದಿಲ್ಲ, ಇದು ಬದಲಾವಣೆ ಆಗಬೇಕು. ಇಂದು ಮಿತಿ ಮೀರಿದ ಮೊಬೈಲ್ ಹಾಗೂ ಟಿವಿ ಬಳಕೆಯಿಂದ ಮಕ್ಕಳನ್ನು ಹಾಳು ಮಾಡುತ್ತಿದೆ. ಅದರಲ್ಲೂಇಂಟರ್ನೆಟ್ ಮಕ್ಕಳನ್ನು ಹೆಚ್ಚು ಅಡ್ಡದಾರಿಗೆ ಎಳೆಯುತ್ತಿದೆ. ಹೀಗಾಗಿ ಮೊಬೈಲ್ ಬಳಕೆ ಸಂಪೂರ್ಣ ಕಡಿಮೆ ಆಗಬೇಕು.ಮಕ್ಕಳಿಗೆ ಮಾರ್ಕ್ಸ್ ಕಡಿಮೆ ಆದರೂ ಪರ್ವಾಗಿಲ್ಲ ಮಕ್ಕಳ ವ್ಯಕ್ತಿತ್ವ ಸರಿಯಾಗಿರುವಂತೆ ಪೋಷಕರು ನೋಡಿಕೊಳ್ಳಬೇಕು.

ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆ ಮಕ್ಕಳಿಗೆ ಹೇಳಿಕೊಡಬೇಕು. ಗಾಂಧೀಜಿ, ಶಿವಾಜಿ ರಂತಹ ಮಹಾನ್ ವ್ಯಕ್ತಿಗಳಿಗೆ ಅವರ ಅವರ ತಾಯಂದಿರು ಮಹಾನ್ ವ್ಯಕ್ತಿಗಳ ಕಥೆಗಳನ್ನು ಹೇಳುತ್ತಿದ್ದ ಕಾರಣ ಅವರು ದೊಡ್ಡ ವ್ಯಕ್ತಿಯಾದರು. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕೊಡುವ ಕಾರ್ಯ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ರೋಟರಿ ಪದಾಧಿಕಾರಿಗಳಾದ ವಿಜಯ್ ಶಂಕರ್, ಎನ್. ಸಿ ಸ್ವಾಮಿ, ಅರುಣ್ ರಕ್ಷಿದಿ, ಚಂದ್ರಶೇಖರ್,ರವಿ, ವಿಜಿತ್, ವಿಜಯ್ ಕುಮಾರ್, ಜಾನೇಕೆರೆ ಪರಮೇಶ್, ಸುರೇಶ್, ಶಶಿಧರ್, ಪ್ರಾಅಂಶುಪಾಲ ಸುಮಂತ್ ಭಾರ್ಗವ್, ಮುಖ್ಯ ಶಿಕ್ಷಕ ರುದ್ರೇಶ್, ಮುಖ್ಯ ಶಿಕ್ಷಕಿ ರತ್ನ, ವಿದ್ಯಾರ್ಥಿ ಮುಖಂಡರಾದ ನಂದನ್, ಸಾನ್ವಿ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *