
ಸಕಲೇಶಪುರ : ತಾಲ್ಲೂಕಿನ ರಾಷ್ಟೀಯ ಹೆದ್ದಾರಿ 75 ರಲ್ಲಿ ನಿರಂತರ ಅಕ್ರಮ ಗೋಸಾಗಾಣಿಕೆ ಮತ್ತು ಟನ್ ಗಟ್ಟಲೆ ಗೋಮಾಂಸ ಹಾಸನದಿಂದ ಮಂಗಳೂರಿಗೆ ರವಾನೆಯಾಗುತ್ತಿದೆ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಮಾಹಿತಿ ಮೆರೆಗೆ 4000 ಕೆಜಿ ಮಾಂಸ ಜಪ್ತಿ ಮಾಡಿದ ಪೊಲೀಸ್ ಇಲಾಖೆ .
22.12.25 ರ ತಡರಾತ್ರಿ 1 ಗಂಟೆಗೆ ಹಾಸನದಿಂದ ಹೋರಾಟ ASHOK LEYLAND ವಾಹನದಲ್ಲಿ 15 ಹಸುಗಳನ್ನ ಕಡಿದು ಮಾಂಸವನ್ನ ಹಾಸನದ ಕಡೆಯಿಂದ ಬರುತಿದ್ದ KA 25 D 3983 ವಾಹನದಲ್ಲಿ 4000 ಕೆಜಿ ಗೂ ಅಧಿಕ ಗೋಮಾಂಸವನ್ನ ಮಂಗಳೂರಿಗೆ ತೆಗೆದುಕೊಂಡು ಹೋಗುತಿದ್ದ ವಾಹನದ ಖಚಿತ ಮಾಹಿತಿಯನ್ನು ನಗರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ತಕ್ಶಣ ಕಾರ್ಯಪ್ರವೃತರಾದ ಪೊಲೀಸರು ಹಾಕಿದ ನಾಕಾಬಂದಿಗೆ ಬೆದರಿ ಪ್ರೇಮಾನಗರದ ಕಡೆ ಕದ್ದು ಕೊಂಡಯ್ಯಲು ಪ್ರಯತ್ನ ಮಾಡಿದ ವಾಹನ ಸಿಕ್ಕಿ ಹಾಕಿಕೊಂಡಿದ್ದು ಕದ್ದು ತಂದಿರುವ ಗೋವುಗಳ ಕಿವಿಯನ್ನು ಕತ್ತರಿಸಿ ಪಶು ಇಲಾಖೆಯಿಂದ ನೀಡಿದ ಒಲೆಯನ್ನು ಕತ್ತರಿಸಿ ತೆಗೆದಿದ್ದಾರೆ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಸಂಚಾಲಕ ಶಿವೂ ತಿಳಿಸಿದ್ದಾರೆ.
KA 25 D 3983 ವಾಹನ ಬರುವ ಮೊದಲು XCV 700 ವಾಹನದಲ್ಲಿ ಬಂದ ದಾಂಡಿಗರು ಯಾರು ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮಂಗಳೂರಿನ ಬಂಟ್ವಾಳದಲ್ಲಿ ತೆಗೆದುಕೊಂಡಿರುವ ಕ್ರಮದ ಹಾಗೆ ಕೊಟ್ಟವನು ಹಾಗು ಗೋವುಗಳನ್ನ ಕೊಟ್ಟವನ ಮೇಲೆಯೂ ಕೇಸ್ ಮಾಡಿ ಮನೆ ಜಪ್ತಿ ಮಾಡಬೇಕು ಎಂದು ಗೋಪ್ರೇಮಿಗಳು ಒತ್ತಾಯಿಸಿದ್ದಾರೆ.
ಪೋಲಿಸರು ವಾಹನ ಚಾಲಕನಾದ ರಾಹಿಲ್ ತಿಪಟೂರ್ ಮೇಲೆ FiR ದಾಖಲಿಸಿ ಮಾಜಾರ್ ಮಾಡಿದ್ದು ಪುರಸಭೆ ವತಿಯಿಂದ ಸರ್ಕಾರೀ ಸ್ಮಶಾನದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಹುಳಿದ್ದು. ಅತ್ಯಂತ ಅಮಾನುಷವಾಗಿ ಗೋವುಗಳನ್ನ ಕೊಂದು ಮಾಂಸವನ್ನು ಸಾಗಿಸುವ ದಂಧೆಕೋರರ ಮೇಲೆ ಕಾನೂನಿನಲ್ಲಿ ಶಿಕ್ಷೆ ಇಲ್ಲದ ಕಾರಣ ಈ ರೀತಿಯ ಕೃತ್ಯ ನಡಿಯುತ್ತಿದೆ ಎಂದು ಸಂಘಟನೆಯವರು ಅಳಲು ತೊಡಗಿಕೊಂಡಿದ್ದಾರೆ.
