
ಸಕಲೇಶಪುರ : ಅಕ್ಟೋಬರ್ 7ರಂದು 5 ಜನರ ಕಳ್ಳರ ಗುಂಪೊಂದು ಕೆರೆಹಳ್ಳಿ ಗ್ರಾಮದ ಸೋಹನ್ ಎಂಬುವವರ ಮನೆಯಲ್ಲಿ ಯಾರು ಇಲ್ಲ ಎಂದು ಭಾವಿಸಿ. ರಾತ್ರಿ ವೇಳೆಯಲ್ಲಿ ಡಕಾಯಿತಿ ಮಾಡಲು ಯತ್ನಿಸಿ ಈ ವೇಳೆ ಮನೆಯಲ್ಲಿದ್ದ ಜನರನ್ನು ಕಂಡು ಪರಾರಿಯಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು ಇದನ್ನು ಆಧರಿಸಿ ಕಳ್ಳರ ಬೆನ್ನತ್ತಿದ ಸಕಲೇಶಪುರ ಪೊಲೀಸರು ಸಕಲೇಶಪುರದ ಮುಜೀಬ್, ಹಾಸನದ ಮುಬಾರಕ್ ಹಾಗೂ ಮೈಸೂರಿನ ಇರ್ಫಾನ್ ಅಕ್ಮಲ್ಶಹಬಾಜ್ ಎಂಬ ಕಳ್ಳರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿ ಜೈಲಿಗೆ ಕಳಿಸುವಲ್ಲಿ ಸಫಲರಾಗಿದ್ಧು, ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ನಗರ ಠಾಣೆ ಸರ್ಕಲ್ ಇನ್ಸೆಕ್ಟರ್ ವನರಾಜು, ನಗರ ಠಾಣಾ ಸಬ್ ಇನ್ಸೆಕ್ಟರ್ ಮಹೇಶ್, ಕ್ರೈಂ ಸಬ್ ಇನ್ಸೆಕ್ಟರ್ ಕೃಷ್ಣಪ್ಪ ಸಿಬ್ಬಂದಿಗಳಾದ ರೇವಣ್ಣ, ಶ್ರೀಧರ್, ಸೋಮು, ಚಂದ್ರಕಾಂತ ಇದ್ದರು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
