ಹಾಸನ : ದಿನಾಂಕ – 29- 12- 2025 ರಂದು ಸೋಮವಾರ ವಿಶ್ವ ಮಾನವ ದಿನದ ಅಂಗವಾಗಿ *ಯುಗ ಕವಿ ಕುವೆಂಪು ರವರ ಜನ್ಮ ದಿನೋತ್ಸವ* ವನ್ನು ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಕುವೆಂಪುರವರಿಗೆ ಭಾವ ನುಡಿ/ಗೀತಾ ನಮನ ಕಾರ್ಯಕ್ರಮವನ್ನು ಸಂಜೆ 7- 30 ಗಂಟೆಗೆ ರೋಟರಿ ಸನ್ ರೈಸ್ ಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಗೀತೆಯೊಂದಿಗೆ ಚಾಲನೆ ಮಾಡಲಾಯಿತು…

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹೆಸರಾಂತ ಜಾನಪದ ಕಲಾವಿದ *ಶ್ರೀ ಕುಮಾರ್ ಕಟ್ಟೆ ಬೆಳಗುಲಿ* ರವರು ಕುವೆಂಪುರವರ ಹಲವಾರು ಗೀತೆಗಳನ್ನು ಹಾಡುವುದರ ಮೂಲಕ ಗೀತ ನಮನವನ್ನು ಆದ್ಯಾರ್ಪಿಸಿದರು…

ರೋ ಭುವನೇಶ್ ಮತ್ತು Ann ಮಧುಮತಿ ಕೃಷ್ಣಮೂರ್ತಿ ರವರು ಕುವೆಂಪುರವರ ಬಗ್ಗೆ ಮಾತನಾಡಿ ನುಡಿ ನಮನಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಸನ್ ರೈಸ್ ನ ಅಧ್ಯಕ್ಷರು ರೋ!! ವಜ್ರ ಕುಮಾರ್ ಎಚ್ ಡಿ, ಕಾರ್ಯದರ್ಶಿ ರೋ !! ಯೋಗೇಶ್ ಕೆ.ಎಸ್, ಖಜಾಂಚಿ ರೋ!! ಗವಿಗೌಡ, ರೋ ರೂಪಶ್ರೀ R, ಮಧುಮತಿ R, ಆಶಾ H D ಮತ್ತು ಕ್ಲಬ್ ನ ನಿರ್ದೇಶಕರು ಗಳಾದ ರೋ!! M.C ರಾಜು, ರೋ ಸಿದ್ದನಂಜಪ್ಪ, ರೋ ಭುವನೇಶ್, ರೋ ಗುರುಮೂರ್ತಿ, ರೋ ಶಶಿಂದ್ರನಾಥಾನ್ D, ರೋ!!ರಾಜೇಶ್, ರೋ!! ದರ್ಶನ್ ಮತ್ತು ಕ್ಲಬ್ ನ ಇತರ ಸದಸ್ಯರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.ಇಂತಿ,*ಟೀಮ್ ಸನ್ ರೈಸ್*

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *