ಸಕಲೇಶಪುರ:- ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಹಿರಿಯೂರು ಕೂಡಿಗೆಯಲ್ಲಿ ಶುಕ್ರವಾರ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಹಾಸನ, ತಾಲೂಕ್ ಪಂಚಾಯಿತಿ ಸಕಲೇಶಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮಾಸಿಕ ಸಂತೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ವಳಲಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆಯಾದ ರೂಪ ರನ್ನಿಸ್ ಜ್ಯೋತಿಬೆಳಗುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಆಗಬೇಕು. ಮಹಿಳೆಯರು ತಾವು ಬೆಳೆದ ತರಕಾರಿಗಳು ಮನೆಯಲ್ಲಿ ತಯಾರಿಸಿದೆ ಸಿಹಿ -ಖಾರ ತಿಂಡಿಗಳನ್ನು ತಂದು ಈ ತರದ ಸಂತೆಯಲ್ಲಿ ಮಾರುವುದರೊಂದಿಗೆ ವ್ಯಾಪಾರದ ಜ್ಞಾನವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲೀಕರಣವಾಗಬಹುದು. ಇಂತಹ ಅವಕಾಶವನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಲಿ ಎಂದು ಹೇಳಿದರು.

ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗೇಶ್ ಹೆಚ್ ಎಸ್ ಮಾತನಾಡಿ ” ಸರ್ಕಾರವು ಶ್ರೀ ಸ್ವಸಹಾಯ ಸಂಘದವರಿಗೆ ಕಡಿಮೆ ದರದಲ್ಲಿ ಬಡ್ಡಿ ಹಣವನ್ನು ಕೊಡುತ್ತಿದ್ದು ಇದನ್ನು ಬಳಸಿಕೊಂಡು ಮಹಿಳೆಯರು ಕೃಷಿ ಉತ್ಪನ್ನಗಳು ಹಾಗೂ ಕೃಷಿಯೇತರ ಉತ್ಪನ್ನಗಳನ್ನು ಉತ್ಪಾದನೆ ಮಾಡಿ ಮಾರುಕಟ್ಟೆಯಲ್ಲಿ ಮಾರುವ ಮೂಲಕ ಸ್ತ್ರೀಯರು ಹಣಕಾಸಿನಲ್ಲಿ ಸಬಲೀಕರಣರಾಗಬೇಕು. ಹಾಗೂ ಇತರದ ಮಾಸಿಕ ಸಂಸ್ಥೆಯಲ್ಲಿ ಭಾಗವಹಿಸುವ ಮೂಲಕ ವ್ಯವಹಾರ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು.ಸಂತೆಯಲ್ಲಿ ಗ್ರಾಮ ಪಂಚಾಯಿತಿಯ ಸ್ತ್ರೀ ಶಕ್ತಿ ಸ್ವಸಾಯ ಸಂಘದ ಸದಸ್ಯರು ಭಾಗವಹಿ ತಾವು ಬೆಳೆದ ತರಕಾರಿಗಳು ಹಾಗೂ ಮನೆಯಲ್ಲಿ ತಯಾರಿಸಿದ ಸಿಹಿ-ಖಾರದ ತಿಂಡಿಗಳನ್ನು ತಂದು ವ್ಯಾಪಾರ ಮಾಡುವ ಮೂಲಕ” ಸಂಜೀವಿನಿ ಮಾಸಿಕ ಸಂತೆ” ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದರ್ಶನ್,ಒಕ್ಕೂಟದ ಅಧ್ಯಕ್ಷರಾದ ತೀರ್ಥ, ಕಾರ್ಯದರ್ಶಿ ಶ್ರೀಮತಿ ಲಲಿತ, ತಾಲ್ಲೂಕು ವ್ಯವಸ್ಥಾಪಕರು ಮಮತ ಎಂ ಬಿ,ಕೆ ಮಂಜಮ್ಮ ತಿಪ್ಪೇಸ್ವಾಮಿ, ಎಲ್ ಸಿ ಆರ್ ಪಿ, ಕೃಷಿ ಸಖಿ, ಪಶು ಸಖಿ, ಸ್ವ ಸಹಾಯ ಗುಂಪಿನ ಸದಸ್ಯರು ಹೆಚ್ಚಿನಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *