ಸಕಲೇಶಪುರ :- ತಾಲ್ಲೂಕಿನ ಬ್ಯಾಕರವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಂದು ದಿನಾಂಕ 3.01.2026ನೇ ಶನಿವಾರದಂದು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಚಿಗುರೋತ್ಸವ -2026 ನೇ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಶಾಲಾ ವಾರ್ಷಿಕ ಸಂಚಿಕೆ “ಚಿಗುರು” ಲೋಕಾರ್ಪಣೆ ಆಗಲಿದೆ . ಶಾಲೆಯ ಶಿಕ್ಷಕರಾಗಿದ್ದ ದಿವಂಗತ ಫರ್ಹ ನಾಜ್ ರ ಹೆಸರಿನಲ್ಲಿ ನವೀಕೃತ ಭೋಧನಾ ಕೊಠಡಿ ಮತ್ತು ನವೀಕೃತ ಶುಶ್ರೂಷಕ ಕೊಠಡಿಯ ಉದ್ಘಾಟನೆ ನೆಡೆಯಲಿದೆ.

ಸಂಜೆ 7 ಗಂಟೆಯಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೆಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಮತ್ತು ಯಕ್ಷಗಾನ ಸಮ್ಮಿಳಿತದ *ಕಾಂತರ ರೂಪಕ* , ಹಳ್ಳಿಯ ಮೂಲ ಸಂಸ್ಕೃತಿಯನ್ನು ಪರಿಚಯಿಸುವ *ಹಳ್ಳಿ ಚಂದ* *ಕಾಣೋ ತಮ್ಮಹಾಡಿನ ರೂಪಕ,* *ಸೈನಿಕರ ಸಲಾಂ* ಕುರಿತ *ಮೈಮ್* ಶೋ, ಸಂವಿಧಾನದ ನಿರ್ಮಾತೃ *ಅಂಬೇಡ್ಕರ್ ಬಗೆಗಿನ ರೂಪಕ ನೃತ್ಯ,* ಜಾನಪದ ಸೊಗಡಿನ ಕೋಲಾಟ, ಆಧುನಿಕತೆ ಮತ್ತು ಜಾನಪದೀಯ ಮಿಳಿತ *ಶಿವನೇ* *ನಿನ್ನಾಟ ಬಲ್ಲವನ್ಯಾರ್ಯಾರು* , *ಲೇಜಿ ಡಾನ್ಸ್, ದ್ರಾವಿಡ ಭಾಷೆಗಳ* *ಸಮನ್ವಯದ ಹಾಡಿನ* ನೃತ್ಯ, ಜತೆಗೊಂದಷ್ಟು ಆಧುನಿಕ ನೃತ್ಯ ಪ್ರಕಾರದ ನೃತ್ಯಗಳಿದ್ದು, *ಶಿಕ್ಷಕರು ಮತ್ತು ವಿದ್ಯಾರ್ಥಿಗಳ* *ಸಂಬಂಧ ಕುರಿತ ಶಿಕ್ಷಕರೇ* *ಭಾಗವಹಿಸಿದ ರೂಪಕ * ಪ್ರಮುಖವಾದ ಕಾರ್ಯಕ್ರಮಗಳು ನಡೆಯಲಿವೆ.

ಶಾಲಾ ವಾರ್ಷಿಕೋತ್ಸವ ಚಿಗುರೋತ್ಸವ ಕಾರ್ಯಕ್ರಮ ಹಾಗೂ ಸಂಜೆ ನಡೆಯುವ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ನೋಡಿ ಆನಂದಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ಯಾಕರವಳ್ಳಿಯ ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಕೇತರ ವರ್ಗದವರು, ಪೋಷಕರು, ಪೋಷಕ ಶಿಕ್ಷಕ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ವಿನಂತಿ ಮಾಡಿಕೊಂಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *