
ಅರಸೀಕೆರೆ : ಮಾಡಾಳು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ಶ್ರೀ ನೀಲಲೋಚನ ಸ್ವಾಮೀಜಿಯವರ ಪುಣ್ಯ ಸಂಸ್ಥಾನೋತ್ಸವ ನಿಮಿತ್ತ ಕರ್ತೃಗದ್ದಿಗೆ ಗೆಪುರೋಹಿತರಿಂದ ರುದ್ರಾಭಿಷೇಕ ಸಾಹಸರ ಬಿಲ್ವಾರ್ಜನೆ ನೂರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿಸೋಮವಾರ ನೆರವೇರಿಸಲಾಯಿತು.
ಸಂಜೆ 4:30ಕ್ಕೆ ಸರಿಯಾಗಿ ಗ್ರಾಮದ ಮೂಲ ಸನ್ನಿಧಿ ಅಮ್ಮನವರ ಬಾವಿಯಿಂದ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಶಿವಲಿಂಗಜ್ಜಯ್ಯನವರ ಮೂರ್ತಿ ಮತ್ತು ಶ್ರೀ ನೀಲಲೋಚನ ಭಾವಚಿತ್ರವನ್ನುಪ್ರತಿಷ್ಠಾಪಿಸಿ ವೀರಗಾಸೆ ಕುಣಿತ ಮಂಗಲ ಕರಡೇವು ವಾದ್ಯದೊಂದಿಗೆ ಉತ್ಸವದಲ್ಲಿ ಮೂಲಸ್ಥಾನ ಗೌರಮ್ಮ ದೇವಿ ದೇವಾಲಯಕ್ಕೆಕೋಡಿ ಮಠದ ಉತ್ತರಾಧಿಕಾರಿ ಚೇತನ್ ಮುರಿದೇವರ ನೇತೃತ್ವದಲ್ಲಿ ನೂರಾರು ಸಂಖ್ಯೆ ಯ ಭಕ್ತರೊ ಡಗೂಡಿ ದೇವಾಲಯಕ್ಕೆ ಕರೆತರಲಾಯಿತು.
ಪುಟಾಣಿ ಹೆಣ್ಣುಮಕ್ಕಳ ನೃತ್ಯ ಉತ್ಸವಕ್ಕೆ ಮೆರಗು ನೀಡಿ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಉತ್ಸವದಲ್ಲಿ ಮೂಲಸ್ಥಾನ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂಎಸ್ ನಟರಾಜ್ ಗೌರವಾಧ್ಯಕ್ಷ ಮಲ್ಲಿಕಾರ್ಜುನಪ್ಪ ಕೋಡಿಮಠ ಏಜೆಂಟ್ ಸಿ ಮಹದೇವಪ್ಪ ಮುಖಂಡರಾದ ಎಂ ಸಿ ನಟರಾಜ್ ಎಂಜಿ ಶಿವಣ್ಣ ಎಂ ಎಸ್ ಮುರುಳೇಗೌಡ ಮಾಡಾಳು ಶಿವಲಿಂಗಪ್ಪಶಂಕರಪ್ಪ ದುಮ್ಮೇನಹಳ್ಳಿಅಶೋಕ್ಎಂ ಟಿ ಲೋಕೇಶ್ ಎಂಡಿ ಸೋಮ ಶೇಖರ ಹೆಚ್ ಕೆ ಚಂದ್ರಪ್ಪ ದಾಸಪ್ಪ ಕಟ್ನಿ ತಿಮ್ಮಯ್ಯ ಮುಂತಾದವರು ಪಾಲ್ಗೊಂಡಿದ್ದರು
