
ಬೇಲೂರು : ಹಾಸನ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಎಚ್.ರಘು ಮಾತನಾಡಿ ಬೇಲೂರು ಅಬಕಾರಿ ವಲಯ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ 12 ಪ್ರಕರಣಗಳಲ್ಲಿ ವಶಪಡಿಸಿ ಕೊಂಡ 41.85 ಲೀಟರ್ ಅಕ್ರಮ ಮಧ್ಯ, 31.5 ಲೀಟರ್ ಕಳ್ಳಬಟ್ಟಿ ಸಾರಾಯಿ, 87 ಲೀಟರ್ ಬೆಲ್ಲದ ಕೊಳೆ, 30.5 ಲೀ ಬೈನೇ ಸೇಂದಿ, 07 ಪ್ಲಾಸ್ಟಿಕ್ ಕೊಡ, 03 ಪ್ಲಾಸ್ಟಿಕ್ ಕ್ಯಾನ್, 6 ಪ್ಲಾಸ್ಟಿಕ್ ಬಾಟಲ್, ಒಂದು ಬಕೆಟ್ 3 ಮಣ್ಣಿನ ಮಡಿಕೆ 01 ಅಲ್ಲುಮಿನಿಯಂ ಕಡುಬಿನ ಪಾತ್ರೆ 01 ಅಲುಮಿನಿಯಂ ಹಂಡೆ 02 ಅಲುಮಿನಿಯಂ ಚಿಕ್ಕ ಪಾತ್ರೆ 01 ಕಬ್ಬಿಣ ಕುಡಗೋಲನ್ನು ವಶಕ್ಕೆ ಪಡೆದು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದಂತೆ ಮತ್ತುತಾಲೂಕು ಆಡಳಿತದ ಅಧಿಕಾರಿ ಮತ್ತು ನಮ್ಮ ಇಲಾಖೆ ಅಧಿಕಾರಿ, ಸಿಬ್ಬಂದಿ ಸಮ್ಮುಖದಲ್ಲಿ ನಾಶ ಪಡಿಸಲಾಗಿದೆ.
ಜತೆಗೆ ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಿದ್ದಾರೆ. ಮತ್ತು ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಮಾರಾಟ ತಡೆಗಟ್ಟಲು ಸಹಕಾರ ನೀಡುವಂತೆ ತಿಳಿಸಿದರು.
ಬೇಲೂರು ವಲಯದ ಅಬಕಾರಿ ನಿರೀಕ್ಷಕಿಅಪೂರ್ವ.ಎ.ಆರ್ ಮಾತನಾಡಿ, ನಮ್ಮ ವಲಯ ವ್ಯಾಪ್ತಿಯಲ್ಲಿ ಅಕ್ರಮ ಮದ್ಯವನ್ನು ಮಾರಾಟ ಮಾಡಲು ಮುಂದಾದ ಮತ್ತು ಕಳ್ಳ ಬಟ್ಟಿ, ಸೇಂದಿ ಸೇರಿದಂತೆ ಇತರೆ ಮದ್ಯವನ್ನು ವಶಕ್ಕೆ ಪಡೆದು ನಮ್ಮ ಹಿರಿಯ ಆದಿಕಾರಿಗಳ ಸಮ್ಮುಖದಲ್ಲಿ ನಾಶ ಪಡಿಸಿದ್ದೇವೆ. ಇದರೊಂದಿಗೆ ಎಲ್ಲೆಲ್ಲಿ ಮಾರಾದ ಬಗ್ಗೆ ಮಾಹಿತಿ ನೀಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಬಕಾರಿ ಇಲಾಖೆ ಪಿಎಸ್ಐ ಸತೀಶ್, ಸಿಬ್ಬಂದಿ ಮಲ್ಲಿಕಾರ್ಜುನ್ ಸೇರಿದಂತೆ ಇತರರಿದ್ದರು
