ಸಕಲೇಶಪುರ : ಬಾಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂ ನಗರ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಸಾವನಪ್ಪಿದ ಕುಟುಂಬಕ್ಕೆ ಭೇಟಿ ನೀಡಿದ ಮಾಜಿ ಶಾಸಕರ ಧರ್ಮ ಪತ್ನಿ ಚಂಚಲ ಕುಮಾರಸ್ವಾಮಿ

ಸ್ಥಳೀಯ ಗ್ರಾಮಸ್ಥರು ಮೃತರ ಕುಟುಂಬದ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ ಎಂದು ತಿಳಿಸಿ ಆ ಮನೆಯಲ್ಲಿ ಒಬ್ಬ ಹೆಣ್ಣು ಮಗಳು ವಿದ್ಯಾಭ್ಯಾಸಕ್ಕಾಗಿ ದೀಪದ ಬೆಳಕಿನಲ್ಲಿ ಓದುತ್ತಿರುವುದನ್ನು ಅಲ್ಲಿಯ ಗ್ರಾಮಸ್ಥರು ಚಂಚಲ ಕುಮಾರಸ್ವಾಮಿ ಅವರ ಗಮನಕ್ಕೆ ತಂದರು.

ಕುಟುಂಬದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬೇಸರ ವ್ಯಕ್ತಪಡಿಸಿದ ಮಾಜಿ ಶಾಸಕರಾದ ಎಚ್ ಕೆ ಕುಮಾರಸ್ವಾಮಿ ರವರ ಧರ್ಮಪತ್ನಿ ಚಂಚಲ ಕುಮಾರಸ್ವಾಮಿ ಮೃತರ ಇವರ ಮನೆಗೆ ವಿದ್ಯುತ್ ಸಂಪರ್ಕ ಸ್ವಂತ ಖರ್ಚಿನಿಂದ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.

ನಂತರ ನುಡಿದಂತೆ ಮರುದಿನ ಬೆಳಗ್ಗೆ ಸ್ವತಹ ಇವರೇ ಇಂಜಿನಿಯರ್ ಅವರಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲು ತಿಳಿಸಿದರು

ಅದರಂತೆ ಆ ಗ್ರಾಮದ ಮುಖಂಡರೊಂದಿಗೆ ಆ ಗ್ರಾಮದ ಯುವಕರುಗಳು ಇಂಜಿನಿಯರ್ ರವರ ಕಚೇರಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿದರು.

ವಿದ್ಯಾಭ್ಯಾಸಕ್ಕೆ ಆ ಮುಗ್ದ ಹೆಣ್ಣು ಮಗಳಿಗೆ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಿ ಕೊಡಲು ತಿಳಿಸಿದ ಮಾಜಿ ಶಾಸಕರು ಎಚ್ ಕೆ ಕುಮಾರಸ್ವಾಮಿ ಹಾಗೂ ಚಂಚಲ ಕುಮಾರಸ್ವಾಮಿ ಮತ್ತು ಆ ಭಾಗದ ಗ್ರಾಮ ಪಂಚಾಯತಿ ಸದಸ್ಯರುಗಳಾದ ರತ್ನಶಿವಣ್ಣ ಮತ್ತು ರೋಹಿತ್ ರವರಿಗೆ ಗ್ರಾಮಸ್ಥರುಗಳು ಅಭಿನಂದನೆಗಳನ್ನು ಸಲ್ಲಿಸಿದ್ಧಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *