
ಸಕಲೇಶಪುರ : ಸಾವಿತ್ರಿಬಾಯಿ ಪುಲೆ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಲಸ್ಟರ್‌ವಾರು ಅತ್ಯುತ್ತಮ ಅಡುಗೆ ಕಾರ್ಯಕರ್ತೆಯರು, ಉತ್ತಮ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಪ್ರತಿಭಾ ಮಂಜುನಾಥ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಂಗೊಳಿಸಿದರು.
ಸಂಘದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಮಹಿಳಾ ಸಬಲೀಕರಣದ ದಿಸೆಯಲ್ಲಿ ಒಂದು ಅದ್ಭುತ ಪ್ರಯತ್ನವಾಗಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಅತ್ರಾಡಿ ಅಮೃತ ಶೆಟ್ಟಿ (ಬೆಳ್ತಂಗಡಿ) ಅವರು ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರ ತತ್ವಗಳು ಮತ್ತು ಆದರ್ಶಗಳು ಇಂದಿನ ಹೆಣ್ಣುಮಕ್ಕಳಿಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಿಕ್ಷಕರು ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಇಂತಹ ದಿನಾಚರಣೆಗಳು ಸಾರ್ಥಕವಾಗುತ್ತವೆ ಎಂದು ನುಡಿದರು.
ಚಂಚಲಕುಮಾರ ಸ್ವಾಮಿಯವರು ಸಾವಿತ್ರಿಬಾಯಿ ಪುಲೆ ಅವರ ಶೈಕ್ಷಣಿಕ ಸಾಧನೆಗಳ ಕುರಿತು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮಾದೇವಿ (ಸಾವಿತ್ರಿಬಾಯಿ ಪುಲೆ ಸಂಘ) ವಹಿಸಿದ್ದರು. ಮಮತಾ ಸ್ವಾಗತ ಕೋರಿದ್ದು, ಮಮತಾ ಯೆಡೇಹಳ್ಳಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ರೇಣುಕಾ ಬಾಯಿ ವಂದಿಸಿದರು. ಕಾರ್ಯಕ್ರಮವನ್ನು ಸುಧಾಕರ ಬಾಬು ಮತ್ತು ಪ್ರಕೃತಿ ನಿರೂಪಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಇಂದಿರಾ ಸೇರಿದಂತೆ, ಶಿಕ್ಷಕರ ಸಂಘದ ಅಧ್ಯಕ್ಷರಾದ ಶಾಂತ, ದೊರೇಶ್, ಜಗದೀಶ್, ಎಸ್ ಸಿ ಎಸ್ ಟಿ ಸಂಘದ ಅಧ್ಯಕ್ಷರಾದ ಮಹೇಶ್,ರೂಪ ರಾಘವೇಂದ್ರ, ಶಾರದಾ ಗುರುಮೂರ್ತಿ, ಚನ್ನವೀನಿಯನ್ ಶೆಟ್ಟಿ, ಕಲ್ಪನಾ ಕೀರ್ತಿ, ವೆಂಕಟಮ್ಮ, ಶೋಭಾ ಮಂಜುನಾಥ್ ಹಾಗೂ ಪ್ರಾಂಶುಪಾಲರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಒಟ್ಟಾರೆಯಾಗಿ ಸಂಘದ ವತಿಯಿಂದ ಆಯೋಜಿಸಲಾದ ಈ ಮಹಿಳಾ ದಿನಾಚರಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿದ್ದು, ಭಾಗವಹಿಸಿದ ಎಲ್ಲರ ಮನಸ್ಸಿನಲ್ಲಿ ಉತ್ತಮ ಸಂದೇಶ ಮೂಡಿಸಿತು.
