ಮಕ್ಕಳೇ ದೃತಿಗೆಡಬೇಡಿ.SSLC ಎಂಬದು ಪ್ರಮುಖ ಘಟ್ಟ ಎಂಬುದು ನಿಜ . .ಆದರೆ SSLC ಪರೀಕ್ಷೆ ಫಲಿತಾಂಶವೇ ನಮ್ಮ ಬದುಕಲ್ಲ ಎಂಬುದನ್ನು ನೆನಪಿಡಿ.ಎಲ್ಲ ಮಕ್ಕಳಿಗೂ ಒಂದೇ ರೀತಿಯ ಬುದ್ದಿಮತ್ತೆ ಹಾಗೂ ಪ್ರತಿಭೆ ಇರುವುದಿಲ್ಲ.ಕಡಿಮೆ ಅಂಕ ಬಂದಿರುವ ಹಾಗೂ ಅನುತ್ತೀರ್ಣರಾದ ಮಕ್ಕಳು ಧೈರ್ಯದಿಂದ ಇರಿ. ಮರಳಿ ಯತ್ನವ ಮಾಡಿ ಯಶಸ್ವಿ ಆಗಿರಿ . ಯಾವ ಮಕ್ಕಳೂ ಕೂಡ ದುಡುಕಿನಿಂದ ಯಾವುದೇ ಕೆಡುಕಿನ ತೀರ್ಮಾನಕ್ಕೆ ಬರಬೇಡಿ.ಇಲ್ಲಿ ಪೋಷಕರ ಜವಾಬ್ದಾರಿ ಅತಿ ಹೆಚ್ಚು .ಮಕ್ಕಳನ್ನು ಒತ್ತಡಕ್ಕೆ ಸಿಲುಕಿಸಬೇಡಿ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿ. ಮರುಪರೀಕ್ಷೆಗೆ ಸಿದ್ಧವಾಗಲು ಸಹಕರಿಸಿ.

ಯಾವುದೇ ಮಕ್ಕಳಿಗೆ ಕೇವಲ ಪರೀಕ್ಷೆ ಫಲಿತಾಂಶ ಅವರ ಬದುಕಿಗೆ ಮಾರಕ ಆಗಬಾರದು ಎಂಬುದು ಕರವೇ ( ಪ್ರವೀಣ್ ಶೆಟ್ಟಿ ಬಣ) ನಿಲುವು ಹಾಗೂ ಕಾಳಜಿ . ಮತ್ತೊಮ್ಮೆ ಎಲ್ಲರಿಗೂ ಶುಭವಾಗಲಿ.ಆದರೂ ನೆನಪಿರಲಿ ಜೀವನಕ್ಕಿಂತ ಜೀವ ದೊಡ್ಡದು .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *