
ಸಕಲೇಶಪುರ : ಸಮಾಜ ಕಲ್ಯಾಣ ಇಲಾಖೆಯಿಂದ 2026-27 ನೇ ಸಾಲಿಗೆ ನೀಡಲಾಗುವ ರಾಜ್ಯಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದ, ಹಿರಿಯ ಜನಪರ ಹೋರಾಟಗಾರರಾದ ಹೆಚ್.ಎ.ನ್.ಅಣ್ಣಯ್ಯ ರವರನ್ನು ಸನ್ಮಾನಿಸಲಾಯಿತು.
ದಿನಾಂಕ 14.04.2026 ರಂದು ವಿಧಾನಸೌಧದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಸರ್ಕಾರದ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.
ಈ ಸಂಧರ್ಭದಲ್ಲಿ ಹಾಸನ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಕರಡಿಗಾಲ ಹರೀಶ್ ರವರು ಮಾತನಾಡುತ್ತಾ ಅಣ್ಣಯ್ಯನವರ ಸಾಧನೆಯನ್ನು ಗೌರವಿಸಿ ಪ್ರಶಸ್ತಿ ಹೊಂದಿರುವುದು ಹೆತ್ತೂರು ಹೋಬಳಿಗೆ ಹಾಗೂ ಸಕಲೇಶಪುರ ತಾಲೂಕಿಗೆ ಸಂದ ಗೌರವ ಎನ್ನುತ್ತಾ ಅವರು ಇನ್ನೂ ಎತ್ತರಕ್ಕೆ ಬೆಳೆಯ ಬೇಕೆಂದು ಆಶೀಸಿದರು.
ಗೌರವ ಸ್ವೀಕರಿಸಿದ ಅಣ್ಣಯ್ಯನವರು ಹಿಂದೂ ಸಂಘಟನೆಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷರಾದ ಬಾಲಕೃಷ್ಣ ಬಿರಡಹಳ್ಳಿ. ಕಾರ್ಯದರ್ಶಿಗಳಾದ ಲೋಹಿತ್. ಹೆತ್ತೂರು ಸುರೇಶ್ ಹಾಗೂ ವನಗೂರು ಷಣ್ಮುಖ ಮೆಡಿಕಲ್ ಸಂಪತ್ ಕರಡಿಗಾಲ ಕಿರಣ್ ಅಕ್ಷಯ್ ಮಧು ಅಶೋಕ ರಾಗಿಪುರ ಹಾಗೂ ಇನ್ನಿತರರು ಹಾಜರಿದ್ದರು.
