ಸಕಲೇಶಪುರ:- ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಹಾಗೂ ಕುರಬತ್ತೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಒಂಬತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಸಕಲೇಶಪುರ ಘಟಕ ಹಾಗೂ ವೈಚಾರಿಕ ದಿನ ಪತ್ರಿಕೆ ಸಹಯೋಗದೊಂದಿಗೆ ಸಮಾಜ ಸೇವಕರಾದ ಹಾಗೂ ದಾನಿಗಳು ಆದ ಬಾಚಿಹಳ್ಳಿ ಪ್ರತಾಪ್ ಗೌಡ ಸಹಕಾರದೊಂದಿಗೆ ವಳಲಹಳ್ಳಿ ಹಾಗೂ ಕುರಬತ್ತೂರು ಗ್ರಾಮ ಪಂಚಾಯಿತಿಯ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನು ಕೊಡುವ ಮೂಲಕ ಸರ್ಕಾರಿ ಶಾಲೆ ಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಶಾಲೆಯಲ್ಲಿ ಕಲಿಯುತ್ತಿರುವ ಗ್ರಾಮೀಣ ಪ್ರದೇಶದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶುಕ್ರವಾರದಂದು ಶಾಲೆಯ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಎರಡು ನೋಟ್ ಪುಸ್ತಕ ಹಾಗೂ ಒಂದು ಪೆನ್ನುಗಳನ್ನು ಹಾಗೂ ಐದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಮೂರು ನೋಟು ಪುಸ್ತಕಗಳು ಹಾಗೂ ಒಂದು ಪೆನ್ನು ವಿತರಿಸಲಾಯಿತು.

ಇಂತಹ ಒಳ್ಳೆ ಕೆಲಸಕ್ಕೆ ಮುಂದಾದ ಸಮಾಜ ಸೇವಕರು ಹಾಗೂ ಧಾನಿಗಳು ಆದ ಬಾಚಿಹಳ್ಳಿ ಪ್ರತಾಪ್ ಗೌಡರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕದ ಮೂಲಕ ಉಚಿತ ನೋಟ್ ಬುಕ್ ಹಾಗೂ ಪೆನ್ನು ವಿತರಿಸಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದರೊಂದಿಗೆ .” ನಾನು ಕೂಡ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕಲಿತಿದ್ದು,ನಮ್ಮ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಸಹಾಯಕ್ಕೆ ಯಾರು ಮುಂದೆ ಬರುತ್ತಿರಲಿಲ್ಲ ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಓದಿ ಬೆಂಗಳೂರಿನಲ್ಲಿ ಉದ್ಯೋಗ ಕೊಂಡುಕೊಂಡಿದ್ದೇನೆ ಹಾಗೂ ಈಗ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಕೆಲವು ಸಮಾಜ ಸೇವಕರು ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುವುದಕ್ಕೆ ಸಹಾಯ ಮಾಡಲು ಮುಂದೆ ಬರುತ್ತಿರುವುದು ಒಳ್ಳೆಯ ವಿಚಾರ ಹಾಗಾಗಿ ಇಂಗ್ಲಿಷ್ ವ್ಯಾಮೋಹದ ನಡುವೆಯೂ ಕೂಡ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರಿ ವಿದ್ಯಾಭ್ಯಾಸ ಮಾಡುತ್ತಿರುವುದು ಖುಷಿಯ ವಿಚಾರ. ನಾವು ಕೊಟ್ಟಿರುವ ಪುಸ್ತಕಗಳು ನಿಮ್ಮ ವಿದ್ಯಾಭ್ಯಾಸಕ್ಕೆ ಸಹಾಯ ಆಗುವುದರೊಂದಿಗೆ ಮುಂದಿನ ದಿನಗಳಲ್ಲಿ ತಾವು ಸರ್ಕಾರಿ ಶಾಲೆಯಲ್ಲಿ ಓದಿ ಒಳ್ಳೆಯ ಫಲಿತಾಂಶ ತರುವುದರೊಂದಿಗೆ ಸರ್ಕಾರಿ ಶಾಲೆ ಹಾಗೂ ತಂದೆ ತಾಯಿಗಳಿಗೆ, ಶಿಕ್ಷಕರಿಗೆ ಒಳ್ಳೆಯ ಹೆಸರು ಹಾಗೂ ಗೌರವ ತರುವುದರೊಂದಿಗೆ. ಸಮಾಜಮುಖಿ ಸೇವಾ ಕೆಲಸಗಳನ್ನು ಮಾಡಬೇಕು. ಎಂದು ಹೇಳಿದರು.

ದಾನಿಗಳೊಂದಿಗೆ ಸೇರಿ ತಾಲೂಕಿನದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನ ಹಂಚುವ ಕೆಲಸ ಮಾಡಲು ಮುಂದಾಗಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕ ಹಾಗೂ ದಾನಿಗಳಾದ ಬಾಚಿಹಳ್ಳಿ ಪ್ರತಾಪ್ ಗೌಡ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ಶಾಲೆಯಲ್ಲೂ ಶಿಕ್ಷಕ ವೃಂದದವರಿಂದ ಹಾಗೂ SDM ಆಡಳಿತ ಮಂಡಳಿಯಿಂದ ಹಾಗೂ ಪೋಷಕರಿಂದ ಮಕ್ಕಳಿಂದ ಈ ಸೇವೆಗೆ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದ್ದು, ಮುಂದಿನ ವಾರ ಇನ್ನೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕದ ಅಧ್ಯಕ್ಷರು ಕರಡಿಗಾಲ ಅರುಣ್ ಗೌಡ, ಸಮಾಜ ಸೇವಕರಾದ ಬಾಚಹಳ್ಳಿ ಪ್ರತಾಪ್ ಗೌಡ, ನಿವೃತ್ತ ಶಿಕ್ಷಕರಾದ ಕೆ ಎನ್ ರಾಜು ಕರಡಿಗಾಲ, ವಳಲಹಳ್ಳಿ sdmc ಮಾಜಿ ಅಧ್ಯಕ್ಷರಾದ ಕೆರೆಮನೆ ನಾಗೇಶ್,ಚಿನ್ನಹಳ್ಳಿ ಪ್ರಜ್ವಲ್,ಕಾರ್ಯದರ್ಶಿ ಸುರೇಶ್ ಇದ್ದರು.

“ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದ್ದು ಖುಷಿಯಾಯಿತು. ಇದೇ ರೀತಿಯ ಸಹಾಯವು ನಮ್ಮ ಸರ್ಕಾರಿ ಶಾಲೆಗೆ ಇರಲಿ. ಇದರಿಂದ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುವುದಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ.”ನಂದಿನಿ ಮುಖ್ಯ ಶಿಕ್ಷಕಿ ವಳಲಹಳ್ಳಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *