ಆಲೂರು : ಟಾಪರ್​ ಸುಮೇದ್ ಮೌರ್ಯ ತಮ್ಮ ಎಸ್​ಎಸ್​ಎಲ್​ಸಿ ಫಲಿತಾಂಶ ನೋಡಿ ಸಂಭ್ರಮದಲ್ಲಿದ್ದಾರೆ ಜಿಲ್ಲೆಗೆ ಪ್ರಥಮ ಸ್ಥಾನ ಬಂದ ಖುಷಿಯಲ್ಲೇ ಪ್ರತಿಕ್ರಿಯಿಸಿರುವ ಸುಮೇಧ “ನನಗಿಂತ ನನ್ನ ಟೀಚರ್ಸ್​ ಹಾಗೂ ತಂದೆ-ತಾಯಿಗೆ ಹೆಚ್ಚಿನ ಸಂತೋಷವಾಗಿದೆ ಮುಂದೆ ಪಿಯುಸಿಯಲ್ಲಿ ಸೈನ್ಸ್​ ವಿಭಾಗದಲ್ಲಿ ವ್ಯಾಸಂಗ ಮಾಡಿ ಐಎಎಸ್ ಅಧಿಕಾರಿ ಆಗಬೇಕೆನ್ನುವ ಕನಸಿದೆ. ನನಗೆ ಓಬ್ಬಳು ಅಕ್ಕ ಇದ್ದು ಅವಳು ಕೂಡ ವಿಜ್ಞಾನ ವಿಭಾಗದಲ್ಲಿ ಹಾಸನದಲ್ಲಿ ಓದುತ್ತಿರುವುದಾಗಿ” ತಿಳಿಸಿ ತಂದೆ ಶಿವಣ್ಣ ಹಾಗೂ ತಾಯಿ ಜಯಂತಿ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಶುಭಾಶಯ; ವಿದ್ಯಾರ್ಥಿ ಸುಮೇಧ ಮೌರ್ಯ ಗೆ ಶುಭಾಶಯ ಕೋರಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೆಗೌಡ ಅವರು, ಅವನ ಸಾಧನೆ ಬೇರೆಯವರಿಗೂ ಸ್ಫೂರ್ತಿ ಆಗಿದ್ದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು..

ಶಾಲಾ ರೀನಾಮ್ಯಾಥಿವ್ ಮಾತಾನಾಡಿ ಕಳೆದ 2018 ರಿಂದ ಇಲ್ಲಿಯವರೆಗೂ ನಮ್ಮ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳು ವಿಶೇಷವಾದ ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದಾರೆ ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರ ಬೋಧನೆಯ ಫಲದಿಂದ ವಿದ್ಯಾರ್ಥಿಗಳ ಈ ಸಾಧನೆಗೆ ಸಾಕ್ಷಿಯಾಗಿದ್ದು ನಮ್ಮ ಎಲ್ಲಾ ಶಾಲಾ ಶಿಕ್ಷಕರಿಗು ಹಾಗೂ ಸಿಬ್ಬಂದಿ ವರ್ಗದವರೆಗೂ ಧನ್ಯವಾದಗಳನ್ನು ತಿಳಿಸಿದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *