
ಬೇಲೂರು : ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿರುವ ಅವಿರತ ಸಂಸ್ಥೆಯವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಾಹಿತಿ ಹಾಗೂ ವೈದ್ಯೆ ಡಾ.ಶಾಲಿನಿ ಹಾಗೂ ನಿವೃತ್ತ ಶಿಕ್ಷಕ ಲಕ್ಷ್ಮಪ್ಪ ಅವರ ನೇತೃತ್ವದಲ್ಲಿ ತಾಲ್ಲೂಕಿನ ಆರು ಹಿಂದುಳಿದ ವರ್ಗಗಳು ಹೆಚ್ಚು ವಾಸಿಸುವ ಪ್ರದೇಶಗಳ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಲಾಯಿತು.
ಶಿವಪುರ ಕಾವಲು , ಬಸ್ತಿಹಳ್ಳಿ , ವೀರದೇವನಹಳ್ಳಿ , ಅಮ್ಮನಬ್ಯಾಡರಹಳ್ಳಿ , ಬಸವರಾಜಪುರ , ಬಸವರಾಜಪುರ ಕಾಲೋನಿ , ಶಾಲೆಯಗಳಿಗೆ ಭೇಟಿ ನೀಡಿ ಮಾತನಾಡಿದ ವೈದ್ಯೆ ಹಾಗೂ ಸಾಹಿತಿ ಡಾ ಶಾಲಿನಿ ಪಠ್ಯಪುಸ್ತಕಗಳನ್ನ ಮಕ್ಕಳಿಗಾಗಿ ಸರ್ಕಾರ ನೀಡುತ್ತದೆ ಆದರೆ ನೋಟ್ ಬುಕ್ ಗಳು ಇರುವುದಿಲ್ಲ, ಎಷ್ಟೋ ಮಕ್ಕಳಿಗೆ ಪುಸ್ತಕಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟದ ಪರಿಸ್ಥಿತಿ ಇರುತ್ತದೆ , ಇತ್ತಿಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವಂತಹ ಸ್ಥಿತಿಯಲ್ಲಿದೆ , ಸರ್ಕಾರಿ ಶಾಲೆಯಲ್ಲಿ ಓದಿದಂತಹ ಸಾಕಷ್ಟು ವಿದ್ಯಾರ್ಥಿಗಳು ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿದ್ಯಾವಂತರಾದ ನಾವುಗಳು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ, ಅವಿರತ ಸಂಸ್ಥೆ ಸುಮಾರು ಹದಿನೈದು ವರ್ಷಗಳಿಂದ ನಿರಂತರವಾಗಿ ಸೇವೆಯನ್ನು ಮಾಡುತ್ತಿದೆ , ಈ ಒಂದು ಸೇವೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದರು.ಈ ಸಂದರ್ಭದಲ್ಲಿ ಡಾ.ಶಾಲಿನಿ , ನಿವೃತ್ತ ಶಿಕ್ಷಕ ಸಿ ಲಕ್ಷ್ಮಪ್ಪ , ಪುನಿತ್ , ಯುವ ಸಾಹಿತಿ ನಿರಂಜನ್, ಅವಿರತ ಸಂಸ್ಥೆಯ ಸದಸ್ಯ ಕಾರ್ತಿಕ್ ಇದ್ದರು.
