ಆಲೂರು : ಪಟ್ಟಣದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ,ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ದೀಡಿರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಅಡುಗೆಮನೆ, ಶೌಚಾಲಯ, ಆಹಾರ ದಾನ್ಯ ಶೇಖರಣೆ ಗೋದಾಮುಗೆ ಬೇಟಿ ನೀಡಿ ಪರಿಶೀಲಿಸಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ನಾನಕ್ಕೆ ಸರಿಯಾಗಿ ಬಿಸಿ ನೀರು ಇಲ್ಲದೆ ಸಮಸ್ಯೆಯಾಗಿದೆ ಹಾಗೂ ಮೆನು ಪ್ರಕಾರ ಊಟದ ವ್ಯವಸ್ಥೆ ಸರಿಯಾಗಿ ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು

ಈ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ಪಾರ್ವತಿ ಮೋಡದ ವಾತಾವರಣ ಇರುವುದರಿಂದ ಸೋಲಾರ್ ನಲ್ಲಿ ಬಿಸಿನೀರು ಬರುತ್ತಿಲ್ಲ ವಿದ್ಯುತ್ ಗೀಜರ್ ದುರಸ್ತಿಯಲ್ಲಿದೆ ಎರಡ್ಮೂರು ದಿನದಲ್ಲಿ ಸರಿಪಡಿಸಿ ನೀರು ಬಿಸಿನೀರು ನೀಡುತ್ತೇವೆ ಎಂದು ತಿಳಿಸಿದರು ನಂತರ ಶಾಸಕರು ಮಳೆ ಹಾಗೂ ಸೀತದ ವಾತಾವರಣ ಇರುವುದರಿಂದ ವಿದ್ಯಾರ್ಥಿಗಳಿಗೆ ಶೀತಾ ನೆಗಡಿ ಹಾಗೂ ಜ್ವರ ಬರುವ ಸಾದ್ಯತೆ ಇದೆ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಆಗುತ್ತದೆ ತಕ್ಷಣ ಸರಿಪಡಿಸಬೇಕು ಏನಾದರೂ ಸಮಸ್ಯೆ ಇದ್ದರೆ ನನಗೆ ಮಾಹಿತಿ ನೀಡಬೇಕು ಹಿರಿಯ ಅಧಿಕಾರಿಗಳಿಗೆ ಸೂಚಿಸುತ್ತೇನೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬಿಸಿನೀರು, ಶುಚಿಯಾದ ಊಟ,ಎಲ್ಲಾ ಹಾಸ್ಟೆಲ್ ಗಳಲ್ಲಿ ಶುಚಿತ್ವ ಕಾಪಾಡಬೇಕು ನಾನು ಯಾವಾಗ ಬೇಕಾದರೂ ಬೇಟಿ ನೀಡುತ್ತೇನೆ ಆ ಸಂದರ್ಭದಲ್ಲಿ ಮಕ್ಕಳು ಅಥವಾ ಅವರ ಪೋಷಕರಿಂದ ದೂರು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ ಸರ್ಕಾರಿ ಹಾಸ್ಟೆಲ್ ಗಳು ಎಂದರೆ ಜನಸಾಮಾನ್ಯರು ಮೂಗು ಮುರಿಯುತ್ತಾರೆ ಹಾಸ್ಟೆಲ್ ಗಳ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳಿವೆ ದೂರಿನ ಹಿನ್ನೆಲೆಯಲ್ಲಿ ಹಾಸ್ಟೆಲ್ ಗೆ ಬೇಟಿ ನೀಡಿದ್ದೇನೆ ಸಣ್ಣಪುಟ್ಟ ಸಮಸ್ಯೆ ಗಳಿವೆ ಸರಿಪಡಿಸಿಕೊಂಡು ಹೋಗುವಂತೆ ಸೂಚಿಸಿದ್ದೇನೆ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಬಡವರ ಮಕ್ಕಳು ಓದುತ್ತಿದ್ದು ಅವರಿಗೆ ಉತ್ತಮ ಗುಣಮಟ್ಟದ ಆಹಾರ ಜೊತೆಗೆ ಶುಚಿತ್ವ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಮುಖ್ಯ ಅಧಿಕಾರಿಗಳು ಜವಾಬ್ದಾರಿಯಿಂದ ಇರಬೇಕು ನಾನು ಬಡ ಕುಟುಂಬದಿಂದ ಬಂದವನು ಈ ಬಗ್ಗೆ ಅರಿವಿದೆ ಹಾಸ್ಟೆಲ್ ಗೆ ಆಗಿಂದಾಗ್ಗೆ ಬೇಟಿ ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಾರ್ಡನ್ ಪಾರ್ವತಿ ಆಶ್ರಯ ಸಮಿತಿ ಸದಸ್ಯ ರಾಜಕುಮಾರ್, ಬಿಜೆಪಿ ಮುಖಂಡ ಹನುಮಂತೇಗೌಡ, ದೊರೇಗೌಡ ಸೇರಿ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *