ಅರಕಲಗೂಡು : ಕರ್ತವ್ಯ ವೇಳೆ ಶಿಸ್ತು ಪಾಲಿಸದೆ ಸಿವಿಲ್ ನ್ಯಾಯಾಧೀಶರಿಗೆ ಅನುಚಿತವಾಗಿ ವರ್ತನೆ ತೋರಿದ ಪೊಲೀಸ್ ಕಾನ್ಸ್ಟೇಬಲ್ ನ್ನು ಅಮಾನತುಗೊಳಿಸಿ ಶಿಸ್ತು ಪ್ರಾಧಿಕಾರಿಗಳು ಮತ್ತು ಪೋಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಪೊಲೀಸ್ ಕಾನ್ಸ್ಟೇಬಲ್ ಸಿಪಿಸಿ 73 ಜಗದೀಶ್ ನ್ನು ಕರೆದು ಅನಕೃ ವೃತ್ತ ಬಳಿ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿರುವ ವ್ಯಕ್ತಿಗಳಿಗೆ ಸರ್ಕಾರಿ ನಿಯಮಗಳನ್ನು ತಿಳಿಸಿ ಎಂದು ಸೂಚಿಸಿದ ನ್ಯಾಯಾಧೀಶರನ್ನೇ ನಿಂದಿಸಿದಿರುವ ಪೋಲಿಸ್ ಪೇದೆ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲೀಸ್ ಇಲಾಖೆ ಕ್ರಮಕೈಗೊಂಡಿದೆ.

ಕರ್ತವ್ಯ ಲೋಪ ಎಸೆಗಿದ ಸಿಬ್ಬಂದಿ ಅರಕಲಗೂಡು ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಸಿ 73 ಜಗದೀಶ್ ಅಮಾನತುಗೊಂಡಿದ್ದಾನೆ.

ಕರ್ತವ್ಯ ವೇಳೆ‌ ಶಾಂತಿಯುತವಾಗಿ ಸೌಜನ್ಯತೆಯ ವರ್ತನೆ ತೋರಬೇಕಾದ ಪೋಲೀಸ್ ಪೇದೆ ಸಾರ್ವಜನಿಕವಾಗಿ ದೌರ್ಜನ್ಯ ತೋರಿರುವ ಪೋಲಿಸ್ ಕಾನ್ಸ್ಟೇಬಲ್ ಜಗದೀಶ್ ವಿರುದ್ಧ. ನ್ಯಾಯಲಯ ಇಲಾಖೆ ತ್ರೀವವಾಗಿ ಖಂಡಿಸಿದ ಕಾರಣ ಶಿಸ್ತು ಪ್ರಾಧಿಕಾರಿಗಳು ಮತ್ತು ಪೋಲಿಸ್ ಅಧೀಕ್ಷಕರು‌ ಅಮಾನತುಗೊಳಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *