
ಸಕಲೇಶಪುರ : ಮಳೆಗಾಲ ಶುರುವಾದರೆ ಕರೆಂಟು ಕಣ್ಣು ಮುಚ್ಚಾಲೆ ಆಟ ಶುರು ಮಾಡುತ್ತದೆ. ಚಿಕ್ಕ ಮಕ್ಕಳಿಂದ ವಯಸ್ಸಾದವರು ಮೊದಲು ಕರೆಂಟ್ ಹೋದರೆ ಬೈಯುವುದು ಲೈನ್ ಮ್ಯಾನ್ ಗಳನ್ನೆ….. ಇನ್ನು ಒಂದು ದಿನ ಕರೆಂಟ್ ಬರದಿದ್ದರೆ ಲೈನ್ ಮ್ಯಾನ್‌ಗಳ ಹೆಂಡತಿ ಮಕ್ಕಳು ಸೇರಿದಂತೆ ಅವರ ಸಂತಾನದವರಿಗೆಲ್ಲ ಬಾಯಿಗೆ ಬಂದಂತೆ ಹಿಡಿ ಶಾಪ ಹಾಕುತ್ತಾರೆ. ಆ ಮಟ್ಟಿಗೆ ಕರೆಂಟು ಎಂಬುವುದು ಜೀವನದಲ್ಲಿ ಜೀವನಾಡಿಯಾಗಿದೆ.
ಪ್ರತಿದಿನದ ಜನರ ಯಾಂತ್ರಿಕ ಜೀವನ ಈ ಕರೆಂಟ್ ಎಂಬ ಫೌಂಡೇಶನ್ ಎಂಬದರ ಮೇಲೆ ನಿಂತಿದೆ. ಬೆಳಗ್ಗೆ ಏಳುವುದರಿಂದ ಸಂಜೆ ಮಲಗುವ ತನಕ ದಿನನಿತ್ಯದ ಒಂದಲ್ಲ ಒಂದು ಚಟುವಟಿಕೆಯಲ್ಲಿ ಕರೆಂಟ್ ಎಂಬುದು ಅತಿ ಮುಖ್ಯವಾದ ಪಾತ್ರ ವಹಿಸುತ್ತದೆ. ಕೆಲವು ವರ್ಷಗಳ ಹಿಂದೆ ಪಟ್ಟಣದ ನಿವಾಸಿಗಳಿಗಷ್ಟೇ ಕರೆಂಟ್ ಅತ್ಯಂತ ಮುಖ್ಯವಾಗಿತ್ತು. ಎಂಬ ಮಾತೊಂದಿದ್ದಾದರೂ ಕಳೆದ 10ರಿಂದ 15 ವರ್ಷದಗಳಲ್ಲಿ ಆಧುನಿಕತೆ ಎಂಬುವುದು ಹಳ್ಳಿಗಾಡಿನ ಪ್ರದೇಶದಲ್ಲೂ ಕೂಡ ಕರೆಂಟ್ ಎಂಬುದರ ಮೇಲೆ ಜೀವನ ಅವಲಂಬಿತವಾಗುವಂತೆ ಮಾಡಿದೆ.
ಪ್ರತಿನಿತ್ಯದ ಜೀವನದಲ್ಲಿ ಇಷ್ಟೆಲ್ಲಾ ಪ್ರಮುಖ ಪಾತ್ರವನ್ನು ವಹಿಸುವ ಈ ಕರೆಂಟ್ ಎಂಬುವುದು ಮಳೆಗಾಲದಲ್ಲಿ ಮಲೆನಾಡಿನ ಜನರಿಗೆ ಮರೀಚಿಕೆಯಂತಾಗುತ್ತದೆ. ಮಲೆನಾಡಿನ ಜನರನ್ನು ಜೋರಾಗಿ ಬೀಸುವ ಗಾಳಿ ,ಮಳೆ,ಗುಡುಗು ಮಳೆಗಾಲದ ಮೂರು ತಿಂಗಳು ವನವಾಸ ಪಡುವಂತಹ ಪರಿಸ್ಥಿತಿ ಉಂಟು ಮಾಡುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಕ್ಕೆ ಸರಿಯಾಗಿ ಕರೆಂಟ್ ವ್ಯವಸ್ಥೆ ಇಲ್ಲದೆ ಎಷ್ಟು ತಾಲೂಕಿನ ಹಳ್ಳಿಗಳ ಜನರು ಮೂರರಿಂದ ನಾಲ್ಕು ದಿನ ಕೆಲವೊಮ್ಮೆ ಒಂದು ವಾರದ ಗಟ್ಟಲೆ ರಾತ್ರಿ ಕತ್ತಲೆಯಲ್ಲಿ ಜೀವನ ನಡೆಸಿದ್ದಾರೆ, ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೊದಲು ಜನರ ಬಾಯಿಯ ಬೈಗುಳಕ್ಕೆ ಸಿಕ್ಕಿಕೊಳ್ಳುವುದೇ ಈ ಲೈನ್ ಮ್ಯಾನುಗಳು.
ಜೋರು ಮಳೆ,ಗಾಳಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾಡುಗಳ ಮಧ್ಯದಲ್ಲಿ, ಗುಡ್ಡಗಾಡುಗಳ ಪ್ರದೇಶದಲ್ಲಿ ತಪ್ಪಿ ಹೋದ ಲೈನ್ ವೈರ್ ಗಳನ್ನು ಸರಿಪಡಿಸಿ ಕರೆಂಟ್ ಕೊಡಲು ಬೆಳಗ್ಗೆ ಮನೆಯಿಂದ ಹೊರಡುವ ಲೈನ್ ಮ್ಯಾನ್ ಗಳು ರಾತ್ರಿ ಎಷ್ಟೊತ್ತಿಗೋ ಮನೆಗೆ ಬರುತ್ತೇವೋ ಇಲ್ಲವೋ ಎಂಬ ಗ್ಯಾರಂಟಿ ಅವರಿಗೆ ಇಲ್ಲದಂತಾಗಿರುತ್ತದೆ.
ಕರೆಂಟ್ ಕೆಲಸವೆ ಜೀವ ಕೈಯಲ್ಲಿ ಹಿಡಿದುಕೊಂಡು ದೇವರು ನೆನೆಸಿಕೊಂಡು ಮಾಡುವಂತ ಕೆಲಸವಾಗಿದೆ.
