
ಚನ್ನರಾಯಪಟ್ಟಣದ ಗ್ರಾಮದೇವತೆ ವಳಗೇರಮ್ಮ ದೇವಾಲಯದಲ್ಲಿ ಜುಲೈ 14, ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ಅಖಂಡ ಭಜನೆ, ಹೋಮ, ಪೂರ್ಣಾಹುತಿ ಹಾಗೂ ಉಯ್ಯಾಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶಾಸಕ ಸಿ.ಎನ್. ಬಾಲಕೃಷ್ಣ ಅವರ ನೇತೃತ್ವದಲ್ಲಿ ನಡೆಯುವ ಈ ಧಾರ್ಮಿಕ ಸಮಾರಂಭದಲ್ಲಿ ತಹಶೀಲ್ದಾರ್ ಜಿ.ಎಸ್. ಶಂಕರಪ್ಪ, ಪುರಸಭೆ ಮುಖ್ಯಾಧಿಕಾರಿ ಯತೀಶ್ ಕುಮಾರ್, ಗುಡಿ ಗೌಡ ಸಿ.ಎನ್. ದೇವರಾಜು, ಪುರಸಭೆಯ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ವಿವಿಧ ಗಣ್ಯರು, ಭಕ್ತಾದಿಗಳು ಹಾಗೂ ದಾನಿಗಳು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಭಕ್ತರಿಗಾಗಿ ಬೃಹತ್ ಅನ್ನದಾನ ಏರ್ಪಡಿಸಲಾಗಿದ್ದು, ಸುತ್ತಮುತ್ತಲಿನ ಏಳು ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಈ ಕುರಿತು ದೇವಾಲಯದ ಸೇವಾಕರ್ತರಾದ ಬಾಬು, ಧೀರಜ್, ನಾಗೇಂದ್ರ, ಉಮೇಶ್, ಮನೋಹರ್, ಅಪ್ಪು, ಹೇಮಂತ್, ಕಿಶನ್, ದೇವೀಶ್, ನಾಗಣ್ಣ, ಮಂಜಣ್ಣ, ಪಾಪಣ್ಣ ಸೇರಿದಂತೆ ಇತರರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:📞 94489 20012 / 81971 76236
