
. ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ನಾರಾಯಣ ಹಾಗೂ ಜಲಜ ದಂಪತಿಗಳು ಮತ್ತು ಇವರ ಮಕ್ಕಳು, ಸೊಸೆಯಂದಿರು ಸೇರಿ ಪುಟಾಣಿ ಮಕ್ಕಳಲ್ಲಿ ದೇಶ ಪ್ರೇಮ ಹಾಗೂ ಆದರ್ಶವ್ಯಕ್ತಿಗಳನ್ನು ಪರಿಚಯ ಮಾಡಿಕೊಡುವ ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂ, ಡಾ||ಬಿ.ಆರ್ ಅಂಬೇಡ್ಕರ್, ಜವಹರಲಾಲ್ ನೆಹರು, ಭಗತ್ ಸಿಂಗ್, ಭಾರತಾಂಭೆ, ಸರಸ್ವತಿ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳು ಸೇರಿದಂತೆ ಒಟ್ಟು 8 ಭಾವಚಿತ್ರಗಳನ್ನು ಉಚಿತವಾಗಿ ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಸೈಕಲ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ಕುಟುಂಬಕ್ಕೆ ಗ್ರಾಮದ ಮಕ್ಕಳ ಭವಿಷ್ಯದ ಮೇಲೆ ಹೊಂದಿರುವ ಕಾಳಜಿಗೆ ಎಲ್ಲರೂ ಅಭಿನಂದಿಸಿದ್ದಾರೆ. ಈ ವೇಳೆ ಗ್ರಾ.ಪಂ ಸದಸ್ಯೆ ಶಶಿ ಕುಮಾರಿ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ, ಪ್ರಭಾಕರ, ರೂಪಿಣಿ ಮಹೇಶ್, ಶಾಲಾ ಶಿಕ್ಷಕಿ ರಜೀನಾ, ಬಿಸಿಯೂಟ ಸಹಾಯಕಿ ರಶೀ,ಅಂಗನವಾಡಿ ಸಹಾಯಕಿ, ಚಿಣ್ಣರ ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


