
ಸಕಲೇಶಪುರ: ರೋಟರಿ ಸಂಸ್ಥೆ ,ತಾಲೂಕು ರೆಸಾರ್ಟ್ ಮಾಲೀಕರ ಸಂಘ, ಹೋಂ ಸ್ಟೇ ಮಾಲೀಕರ ಸಂಘ, ಕಾರು ಜೀಪು ,ಆಟೋ ಹೋಟೆಲ್ ಮಾಲೀಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಇಂದು ಫೆಬಲ್ಸ್ ಅಂಡ್ ಬೀನ್ಸ್ ರೆಸಾರ್ಟ್ ಮಕ್ಕಿಹಳ್ಳಿ ಗ್ರಾಮ , ವೆಂಕಟಹಳ್ಳಿ ಯಲ್ಲಿ
ಪರಿಸರ ಉಳಿಸೋಣ ,ಪ್ರವಾಸೋದ್ಯಮ ಬೆಳೆಸೋಣ ಎಂಬ ಸಂವಾದ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು
ಈ ಸಂವಾದದಲ್ಲಿ ಪ್ರವಾಸಿಗರಿಗೆ ರಕ್ಷಣೆ ,ಸೂಕ್ತ ಮಾರ್ಗದರ್ಶನ, ಆತಿಥ್ಯ, ಪ್ರವಾಸಿ ಸ್ಥಳಗಳು, ನಮ್ಮೂರಿನ ಸಂಸ್ಕೃತಿ ,ಜಾತ್ರೆ, ಸುಗ್ಗಿ ಹಾಗೂ ಸಾಂಪ್ರದಾಯಿಕ ಬೆಳೆಗಳ ಪರಿಚಯ ,ವೀಕ್ಷಣೆ ಸಂಬಂದಪಟ್ಟ ಹಾಗೆ ಅನೇಕ ವಿಚಾರಗಳ ಬಗ್ಗೆ ಸಂವಾದ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು
ಈ ಸಂದರ್ಭದಲ್ಲಿ ರೆಸಾರ್ಟ್ ಮಾಲೀಕರ ಸಂಘದ ಅದ್ಯಕ್ಷ ಸ್ತಾರೆ ಲೋಕೇಶ್, ಕಾರ್ಯದರ್ಶಿ ಹರೀಶ್ ಕಾಡುಮಕ್ಕಿ, ಹೋಂ ಸ್ಟೇ ಮಾಲೀಕರ ಸಂಘದ ಅದ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಜಯಪ್ರಕಾಶ್, ಆಶ್ರಿತ ಹೋಟೆಲ್ ನ ವಿನಯ್ ಬೆಳ್ಳೂರು, ರೋಟರಿ ಸಂಸ್ಥೆಯ ಕಾರ್ಯದರ್ಶಿ ಜಾನೆಕೆರೆ ಆರ್ ಪರಮೇಶ್, ಕಾರು ಚಾಲಕರ ಸಂಘದ ಕುಮಾರ್, ಆಟೋ ಚಾಲಕರ ಸಂಘದ ಅದ್ಯಕ್ಷ ಪುಟ್ಟರಾಜು ಮಳಲಿ ಇದ್ದರು.




