ಅರಸೀಕೆರೆ : ನೂತನ ದೇವಾಲಯ ಲೋಕಾರ್ಪಣೆ ಅಂಗವಾಗಿ ಭಾನುವಾರ ಸಂಜೆಯಿಂದಲೇ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮುರಿದೇವರ ಸಾನಿಧ್ಯ ಮತ್ತು ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಆರಂಭಗೊಂಡಿತು ಮೂಲ ಸನ್ನಿದಿಯಲ್ಲಿ ಮುತ್ತೈದೆಯರು ಗಂಗಾ ಪೂಜೆ ನೆರವೇರಿಸಿ ಕುಂಭಗಳನ್ನು ತಲೆಯ ಮೇಲೆ ಹೊತ್ತುಮಂಗಲ ಕರಡೇವು ವಾದ್ಯದೊಂದಿಗೆ ಉತ್ಸವದೊಡನೆ ಕೆರೆ ಏರಿ ಮೇಲೆ ಇರುವ ಚನ್ನಬಸವಣ್ಣ ದೇವಸ್ಥಾನಕ್ಕೆ ತಲುಪಿತು.

ನಂತರ ಅಲ್ಲಿಗೆ ಆಗಮಿಸಿದ 12 ಗ್ರಾಮಗಳ ಗ್ರಾಮ ದೇವತೆ ಕರಿಯಮ್ಮ ದೇವಿ ಚೌಡೇಶ್ವರಿ ಬೊಮ್ಮಸಂದ್ರ ಚನ್ನಬಸವಣ್ಣ ಕಡಲಮಗೆ ಬಸವಣ್ಣಹೊಸಳ್ಳಿ ಬಸವಣ್ಣ ರಂಗನಾಥಸ್ವಾಮಿ ಸೇರಿದಂತೆ18 ಗ್ರಾಮಗಳ ದೇವರುಗಳು ಉತ್ಸವದಲ್ಲಿ ಪಾಲ್ಗೊಂಡವು ನಂತರ ಜೇನುಕಲ್ ಸಿದ್ದೇಶ್ವರ ಸ್ವಾಮಿ ನೇತೃತ್ವದಲ್ಲಿ ದೇವಾಲಯ ಮುಂಭಾಗ ನಿರ್ಮಿಸಿದ್ದ ಹವನ ಹೋಮ ಯಜ್ಞ ಕುಂಡಕ್ಕೆ ಅಗ್ನಿಸ್ಪರ್ಶಣೆ ಮಾಡಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು

ಇಂದು ಮುಂಜಾನೆಯಿಂದಲೇ ಯಜ್ಞ ಯಾಗಾದಿಗಳು ರಾಜಶೇಖರ ಶಾಸ್ತ್ರಿಗಳ ಪುರೋಹಿತರ ಆರು ಮಂದಿ ತಂಡದೊಂದಿಗೆ ಮಂತ್ರಘೋಷಗಳು ಮೊಳಗಿದವು ಮಧ್ಯಾಹ್ನ 12 ಗಂಟೆಗೆ ಕೆಬಿದರೆ ದೊಡ್ಡ ಮಠದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ ವಿಮಾನ ಗೋಪುರದ ಮೇಲೆ ಕಳಸವನ್ನು ಪ್ರತಿಷ್ಠಾಪಿಸಿದರು

ಈ ಸಂದರ್ಭದಲ್ಲಿ ಶ್ರೀ ಚೇತನ್ ಮರಿ ದೇವರು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ಕೋಡಿಮಠದ ಏಜೆಂಟ್ ಮಹದೇವಪ್ಪ ಸೇರಿದಂತೆ ಸಹಸ್ರರ್ ಮಂದಿ ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು ಎರಡು ದಿನಗಳ ಕಾಲ ನಡೆದ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರ್ ಮುಂದಿ ಭಕ್ತರು ಭಾಗಿಯಾಗಿ ಕಣ್ತುಂಬಿ ಕೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed