
ಆಲೂರು, ಸೆ.11: ಆಲೂರು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕೆ.ಹೊಸಕೋಟೆಯ ಎಸ್.ಎಸ್.ಕೆ.ಎನ್.ಆರ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 3000 ಮೀಟರ್ ಓಟದಲ್ಲಿ ಪೂರ್ವಿಕ ಕೆ.ಎಂ. ದ್ವಿತೀಯ ಸ್ಥಾನ, 100 ಮೀಟರ್ ಓಟದಲ್ಲಿ ಗೌತಮಿ ಕೆ.ಆರ್. ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ದೀಪ್ತಿ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ಲಿಖಿತ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ತ್ರಿವಿಧ ಜಿಗಿತದಲ್ಲಿ ಗೌತಮಿ ಕೆ.ಆರ್. ಪ್ರಥಮ ಹಾಗೂ ಇಂಚರ ಕೆ.ಎಸ್. ದ್ವಿತೀಯ ಸ್ಥಾನ, ಹ್ಯಾಮರ್ ಥ್ರೋನಲ್ಲಿ ಗೌತಮಿ ಕೆ.ವಿ. ಪ್ರಥಮ ಸ್ಥಾನ ಗಳಿಸಿದ್ದಾರೆ. ಎತ್ತರ ಜಿಗಿತದಲ್ಲಿ ಇಂಚರ ಕೆ.ಎಸ್. ಪ್ರಥಮ ಹಾಗೂ ಫಾತಿಮಾ ರಂಸೀದ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ತಂಡದ ಆಟಗಳಲ್ಲಿಯೂ ಬಾಲಕಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಬಾಲಕಿಯರ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಹಾಗೂ 4×400 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಅದ್ಭುತ ಪ್ರದರ್ಶನದ ಫಲವಾಗಿ ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿ ಎಸ್.ಎಸ್.ಕೆ.ಎನ್.ಆರ್ ಪ್ರೌಢಶಾಲೆಯ ಪಾಲಾಗಿದೆ.ಬಾಲಕರ ವಿಭಾಗದಲ್ಲಿಯೂ ಶಾಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.
ತ್ರಿವಿಧ ಜಿಗಿತದಲ್ಲಿ ರೋಹನ್ ದ್ವಿತೀಯ, ಉದ್ದ ಜಿಗಿತದಲ್ಲಿ ರೋಹನ್ ದ್ವಿತೀಯ, ಎತ್ತರ ಜಿಗಿತದಲ್ಲಿ ಫರ್ಹಾನ್ ಅಕ್ತರ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಬಾಲಕರ 4×400 ಮೀಟರ್ ರಿಲೇ ತಂಡ ತೃತೀಯ ಸ್ಥಾನ ಗಳಿಸಿದೆ.ವೈಯಕ್ತಿಕ ಹಾಗೂ ತಂಡದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತೋರಿದ ಸತತ ಪರಿಶ್ರಮ, ಶಿಸ್ತು ಮತ್ತು ಕ್ರೀಡಾ ಮನೋಭಾವದ ಫಲವಾಗಿ ಎಸ್‌ಎಸ್‌ಕೆಎನ್‌ಆರ್ ಪ್ರೌಢಶಾಲೆಗೆ ಶಾಲಾ ಸಮಗ್ರ ಪ್ರಶಸ್ತಿ ಲಭಿಸಿರುವುದು ಶಾಲೆಯ ಹೆಮ್ಮೆಯ ಸಂಗತಿಯಾಗಿದೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಮಲ್ನಾಡ್ ಪ್ರೌಢಶಾಲಾ ಸಂಘದ ಅಧ್ಯಕ್ಷರಾದ ಎನ್.ಕೆ. ಶಾಮರಾವ್, ಉಪಾಧ್ಯಕ್ಷರಾದ ಎನ್.ಬಿ. ಉದಯ್ ಕುಮಾರ್, ಕಾರ್ಯದರ್ಶಿಗಳಾದ ಕೆ.ಎನ್. ಮಧುಸೂದನ್ ಹಾಗೂ ಸಂಘದ ನಿರ್ದೇಶಕರು ಮತ್ತು ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿ, ಕ್ರೀಡಾಪಟು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದು, ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.“ಕ್ರೀಡೆಯಲ್ಲಿ ಗೆಲುವು ಮಾತ್ರವಲ್ಲ, ಪರಿಶ್ರಮ, ಶಿಸ್ತು ಮತ್ತು ತಂಡದ ಮನೋಭಾವವೇ ನಿಜವಾದ ಯಶಸ್ಸು” ಎಂಬುದನ್ನು ಸಾಬೀತುಪಡಿಸಿರುವ ಎಸ್.ಎಸ್.ಕೆ.ಎನ್.ಆರ್ ಪ್ರೌಢಶಾಲೆಯ ಕ್ರೀಡಾಪಟುಗಳ ಸಾಧನೆ ಶಾಲೆಗೆ ಹೆಮ್ಮೆಯ ಗರಿಮೆಯನ್ನು ತಂದಿದೆ.



