ಆಲೂರು: ಕರ್ನಾಟಕ ರಕ್ಷಣಾ ವೇದಿಕೆಯ ಹಾಸನ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಆಲೂರು–ಸಕಲೇಶಪುರ ತಾಲೂಕು ಉಸ್ತುವಾರಿಗಳಾದ ಶ್ರೀ ರಘುಪಾಳ್ಯ ಅವರಿಗೆ ಅವರ ಕನ್ನಡಪರ ಹೋರಾಟ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ‘ಸಮಾಜ ಸೇವಾ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠ, ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಬೆಂಗಳೂರು, ಜಾನಪದ ಪರಿಷತ್ ಹಾಸನ, ಜಾನಪದ ಪರಿಷತ್ ಆಲೂರು ತಾಲೂಕು ಹಾಗೂ ಲಯನ್ಸ್ ಸಂಸ್ಥೆ ಆಲೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಆದರ್ಶ ಶಿಕ್ಷಕರಿಗೆ ಗೌರವ ಸಮರ್ಪಣೆ ಮತ್ತು ಜಾನಪದ ಕಲರವ’ ಕಾರ್ಯಕ್ರಮದಡಿ ‘ಹಳ್ಳಿ ಸೊಗಡು–ಗುರುಗಳ ಬೆಡಗು’ ಎಂಬ ವಿಶೇಷ ಕಾರ್ಯಕ್ರಮವನ್ನು ಕಾರ್ಜುವಳ್ಳಿ ಹಿರೇಮಠದಲ್ಲಿ ಆಯೋಜಿಸಲಾಗಿತ್ತು.

ಶ್ರೀ ಶ್ರೀ ಷ.ಬ್ರ. ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳವರ ಸಾನಿಧ್ಯದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶ್ರೀ ರಘುಪಾಳ್ಯ ಅವರ ಕನ್ನಡಪರ ಹೋರಾಟ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಸಮಾಜ ಸೇವಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಆಲೂರು ತಾಲೂಕು ಕರವೇ ಅಧ್ಯಕ್ಷರಾದ ನಟರಾಜ್ ಹಾಗೂ ಆಲೂರು ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಗೃಹಲಕ್ಷ್ಮಿ ಅವರಿಗೂ ಸಮಾಜ ಸೇವಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಸುಮಾರು 15 ಮಂದಿ ಶಿಕ್ಷಕರಿಗೆ ಗೌರವ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಹಂಪನಹಳ್ಳಿ ತಿಮ್ಮೇಗೌಡ, ಎಂ.ಜಿ. ಪರಮೇಶ್, ಸಿ.ಚಾ. ಯತೀಶ್ವರ್, ಪ್ರೊಫೆಸರ್ ಪ್ರಭುಶಂಕರ್, ರೇಣುಕ ಪ್ರಸಾದ್, ಶಿವಮೂರ್ತಿ, ಟಿಕ್ ರಾಜು, ಡಿ.ಎಸ್. ಜಯಣ್ಣ, ನಟರಾಜ್ ನಾಕಲಗೋಡು, ಶಿಕ್ಷಕರಾದ ಹರೀಶ್ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *