ಸಕಲೇಶಪುರ: ಸಮಾಜದಲ್ಲಿ ಯಾವುದೇ ಸಂಘ ಸಂಸ್ಥೆಗಳು ಬಲಿಷ್ಠವಾಗಿದ್ದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಶಾಸಕ ಸೀಮೆಂಟ್ ಮಂಜುನಾಥ್ ಹೇಳಿದರು.

ಕಸಬಾ ಹೋಬಳಿ ಬೆಳೆಗಾರರ ಸಂಘ ಬುಧುವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬೆಳೆಗಾರರ ಸಮ್ಮೇಳನ ಹಾಗೂ ವಸ್ತುಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಯ ಬಗ್ಗೆ ಸ್ವತ ಕಾಫಿ ಬೆಳೆಗಾರನಾಗಿ ನನಗೆ ಅರಿವಿದ್ದು ಬೆಳೆಗಾರರ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದರು.

ಸಮಸ್ಯೆ ತೀವ್ರತೆಯ ಆಧಾರದ ಮೇಲೆ ಹೋರಾಟ ಹಮ್ಮಿಕೊಳ್ಳುವ ಅಗತ್ಯವಿದೆ. ಸದ್ಯ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಬೆಳೆಗಾರರನ್ನು ಗೌರವದಿಂದ ನಡೆಸಿಕೊಡುವ ಮೂಲಕ ಶೀಘ್ರ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ ಮೋಹನ್ ಕುಮಾರ್ ಮಾತನಾಡಿ, ಒಕ್ಕೂಟದ ಹೋರಾಟದ ಫಲವಾಗಿ ಬೆಳೆಗಾರರ ಒತ್ತುವರಿ ಭೂಮಿ ಗುತ್ತಿಗೆ ನೀಡಲು ಹಿಂದಿನ ಸರ್ಕಾರ ಮುಂದಾಗಿದ್ದು ಸದ್ಯ ಕಾರ್ಯಗತಗೊಳ್ಳುವುದು ವಿಳಂಭವಾಗಿದೆ. ಪ್ರಸಕ್ತ ಸರ್ಕಾರ ಈ ಯೋಜನೆ ಜಾರಿಗೊಳಿಸಿದರೆ ಬೆಳೆಗಾರರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಂಬಂದ ಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದರು.

ಇದಲ್ಲದೆ ಕಾಡಾನೆ ಸಮಸ್ಯೆ ನಿವಾರಣೆ,ಅತಿವೃಷ್ಟಿಗೆ ಪರಿಹಾರ ಒದಗಿಸುವುದು,ಬ್ಯಾಂಕ್ ಸಾಲ ಸಮಸ್ಯೆ ಕುರಿತ ನಮ್ಮ ಸಂಘಟನೆಗಳ ಹೋರಾಟಕ್ಕೆ ಅಲ್ಪ ಪ್ರಮಾಣದ ಪರಿಹಾರ ಕಂಡುಕೊಳ್ಳಲು ಯಶಸ್ವಿಯಾಗಿದ್ದೇವೆ. ನಿರಂತರ ನಮ್ಮ ಹೋರಾಟದಿಂದ ಇತ್ಯರ್ಥಗೊಂಡಿರುವ ಸಮಸ್ಯೆಗಿಂತ ಸದ್ಯ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ದೊಡ್ದದಾಗಿದ್ದು ಸರ್ಕಾರ ಬೆಳೆಗಾರರ ಬಗ್ಗೆ ಮೃದು ಧೋರಣೆ ಅನುಸರಿಸುವ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗ ಬೇಕು ಎಂದರು.

ಹಾಸನ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ, ಸಂಘಟನೆಗಳು ಬಲಿಷ್ಠವಾಗಿದ್ದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದು. ಸದ್ಯ ಗ್ರಾಪಂ ಮಟ್ಟದವರಗೆ ಸಂಘಟನೆ ವಿಸ್ತಾರಗೊಂಡಿದ್ದು ಸಂಘಟನೆಯಿAದ ಹೊರಗಿರುವ ಬೆಳೆಗಾರರು ಸಂಘಟನೆಗಳಲ್ಲಿ ಕೂಡಿಕೊಳ್ಳುವ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸ ಬೇಕು ಎಂದರು.ಕಸಬಾ ಹೋಬಳಿ ಬೆಳೆಗಾರರ

ಸಂಘದ ಅಧ್ಯಕ್ಷ ಕೌಡಳ್ಳಿಲೋಹಿತ್ ಮಾತನಾಡಿ,ಹವಮಾನ ವೈಪರೀತ್ಯ,ಕೂಲಿಕಾರ್ಮಿಕರ ಸಮಸ್ಯೆ,ಕಾಡುಪ್ರಾಣಿಗಳ ಹಾವಳಿಯಿಂದ ತಾಲೂಕಿನ ಕಾಫಿ ಬೆಳೆಗಾರರು ನಲುಗುವಂತಾಗಿದೆ. ಕಾಫಿ ಧಾರಣೆ ಏರಿಕೆಯಾಗಿದ್ದರು ಇದರ ಫಲ ಬೆಳೆಗಾರರಿಗೆ ದೊರೆಯದಾಗಿದೆ. ಬ್ಯಾಂಕ್‌ಗಳು ಸಹ ಕಾಫಿ ಬೆಳೆಗಾರರನ್ನು ವಿರೋಧಿಗಳ ರೀತಿಯಲ್ಲಿ ನೋಡುತ್ತಿದೆ. ಸೀಬಿಲ್ ಸ್ಕೂರ್ ಸಮಸ್ಯೆಯಿಂದ ಬೆಳೆಗಾರರು ಸಾಲ ಮಾಡುವುದು ದುಸ್ಥರವಾಗಿದೆ. ಹೀಗೆ ಹತ್ತಾರು ಸಮಸ್ಯೆಗಳಿಂದ ಬಳಲುತಿರುವ ಕಾಫಿ ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಪುನೀತ್ ಅರೆಕರೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ ಪುರ್ನವ್ ಪೋಷಕರನ್ನು ಸನ್ಮಾನಿಸಲಾಯಿತು. ಈ ವೇಳೆ ಕೃಷಿ ವಸ್ತುಪ್ರದರ್ಶನ ಗಮನ ಸೆಳೆಯಿತು.ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನಕಾರ್ಯಧರ್ಶಿ ಕೃಷ್ಣಪ್ಪ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಪ್ರಧಾನ ಕಾರ್ಯಧರ್ಶಿ ರಾಜೀವ್, ವಿದ್ಯಾಶಂಕರ್,ಕಸಬಾ ಬೆಳೆಗಾರರಸಂಘದ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿಖಂಡಿಗೆ. ಎಂ.ಎಚ್ ಪ್ರಕಾಶ್,ಉದಯ್ ಮುಂತಾದವರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *