
ಸಕಲೇಶಪುರ:- ನಗರದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ 1-7-23 ರಿಂದ 16-7-23 ರವರಗೆ ಶ್ರೀ ಚೇತನ್ ಗುರುಜಿ ರಾಜ್ಯ ಸಂಚಾಲಕರು ನಡೆಸಿ ಕೊಡುತ್ತಾರೆ ಎಂದು ಎಂ ಪಿ ಹರೀಶ್ ವಕೀಲರು ನೋಟರಿ ಪಬ್ಲಿಕ್ ಭಾರತ ಸರ್ಕಾರ ಬುಧವಾರ ಪತ್ರಿಕಾ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು
ಈ ಕಾರ್ಯಕ್ರಮವನ್ನು ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜು ಉದ್ಗಾಟಿಸುವರು, ಅಧ್ಯಕ್ಷತೆಯನ್ನು ಗುರುವೇಗೌಡ ಕಲ್ಯಾಣ ಮಂಟಪದ ಅದ್ಯಕ್ಷರಾದ ಬಿ ಡಿ ಬಸವಣ್ಣ ವಹಿಸುವರು ಮುಖ್ಯ ಅತಿಥಿಗಳಾಗಿ ಧನಲಕ್ಷ್ಮಿ ಹಿರಿಯ ಶ್ರೇಣಿ ನ್ಯಾಯಾದಿಶರು ಸಕಲೇಶಪುರ, ಆರಕ್ಷಕ ಉಪ ಅಧಿಕ್ಷರಾದ ಮಿಥುನ್, ಲಯನ್ಸ್ ರಾಜ್ಯಪಾಲರಾದ ಸಂಜೀತ್ ಶೆಟ್ಟಿ ವಹಿಸಲಿದ್ದಾರೆ ಎಂದರು
ಆರೋಗ್ಯಕ್ಕಾಗಿ ವಿಶ್ವಕ್ಕೆ ನಮ್ಮ ಭಾರತದ ಯೋಗ ಕೊಡುಗೆ ನೀಡಿದೆ ,ಇಂದು ನಾವು ಹಲವಾರು ದೀರ್ಘಕಾಲಿಕ ರೋಗಗಳಿಗೆ ತುತ್ತಾಗುತ್ತಿದ್ದೇವೆ ಇಂತಹ ಸಂದರ್ಭದಲ್ಲಿ ನಾವು ಪ್ರತಿ ದಿನ ಯೋಗವನ್ನು ಮಾಡುವ ಮೂಲಕ ಒಔಷದಿ ಮತ್ತು ಮದ್ದುರಹಿತ ಜೀವನವನ್ನು ನಡೆಸಬಹುದಾಗಿದೆ ಎಂದರು .
ಇಲ್ಲಿ ಯೋಗದ ಜೊತೆಗೆ ಜೀವನ ಪದ್ದತಿ ಮತ್ತು ಆಹಾರ ಪದ್ದತಿ ಯ ಬಗ್ಗೆಯು ತಿಳಿಸಿಕೊಡಲಾಗುದು ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದುಡಾ. ನವೀನ್ ಶೆಟ್ಟಿ ಹೇಳಿದರು.ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡ ವೀರ ಯೋಧರಿಗೆ ಸನ್ಮಾನಿಸಲಾಗುವುದು ಎಂದು ಎಚ್ ಶ್ರೀನಿವಾಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯೋಗ ಚೇತನ ಟ್ರಸ್ಟ್ ಅಧ್ಯಕ್ಷರಾದ ಲಕ್ಷ್ಮೀ ರಂಗನಾಥ್, ಉಪಾಧ್ಯಕ್ಷರಾ ಲಕ್ಮಣ್ ಕೀರ್ತಿ ಉಪಸ್ಥಿತರಿದ್ದರು.
