
ಸಕಲೇಶಪುರ – ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಕ್ರಮ ಗೋಸಾಗಾಟ ಅಕ್ರಮವಾಗಿ ಗೋಮಾಂಸ ಮಾರಾಟ. ಕಾಡುಮನೆ. ದೆಖ್ಲಾ. ಕಾಡುಕೋಣ ಸೇರಿದಂತೆ ಮನೆಯಲ್ಲಿ ಸಾಕಿರುವ ಗೋವುಗಳಿಗೆ ಬಂದೂಕಿನಿಂದ ಗುಂಡು ಹಾರಿಸಿ ಮಾಂಸ ಮಾಡಿ ಕೇರಳ ಮಂಗಳೂರು ಭಾಗಗಳಿಗೆ ಮಾಂಸ ಸಾಗಾಟ ಮಾಡುತ್ತಿರುವ ವ್ಯವಸ್ಥಿತ ಜಾಲ ಹೆಚ್ಚಾಗುತ್ತಿದೆ.
ಗೋಮಾಂಸ ಸಾಗಾಟ. ಅಕ್ರಮ ಗೋಸಾಗಾಟ ಆರೋಪಿಗಳಿಗೆ ಜಾಮೀನು ಕೇವಲ ಒಂದು ದಿನಕ್ಕೆ ದೊರೆಯುತ್ತದೆ ಆರೋಪಿಗಳಿಗೆ ಇದರಿಂದ ಕಾನೂನಿನ ಮೇಲೆ ಗೌರವವೇ ಇಲ್ಲದಂತಾಗಿದೆ.
ಅಕ್ರಮವಾಗಿ ಗೋಸಾಗಾಟ ಗೋಮಾಂಸ ಸಾಗಾಟದಲ್ಲಿ ಭಾಗಿಯಾಗಿ ಜಪ್ತಿಯಾದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳದೆ ವಾಹನಗಳನ್ನು ಬಿಡುಗಡೆ ಮಾಡಿತ್ತಿದ್ದು ಆರೋಪಿಗಳು ಮತ್ತೆ ಅದೇ ಕಾರ್ಯದಲ್ಲಿ ನಿರತವಾಗಿದ್ದರೆ.
ಸಕಲೇಶಪುರ ತಾಲ್ಲೂಕಿನಲ್ಲಿ ಗೋಮಾಂಸ ಹಾಗೂ ಸಾಗಾಟ ಪದೆಪದೇ ಭಾಗಿಯಾಗಿರುವ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ತಾಲೂಕಿನಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು.
ಈ ನಿಟ್ಟಿನಲ್ಲಿ ದಿನಾಂಕ 30/06/2023 ರಂದು ಬೆಳಗ್ಗೆ 11 ಗಂಟೆಗೆ ತಾಲ್ಲೂಕು ಆಡಳಿತದ ವೈಫಲ್ಯವನ್ನು ಖಂಡಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
