
ಇಷ್ಟುದಿನ ಕಾವೇರಿ ವಿಚಾರಕ್ಕೆ ನಡೆಯುತ್ತಿದ್ದ ರಾಜಕೀಯ ಈಗ ಬೆಂಗಳೂರಿನ ವೃಷಭಾವತಿ ವಿಷಯಕ್ಕೂ ವಕ್ಕರಿಸಿದೆ. ಬೆಂಗಳೂರಿನಲ್ಲಿ ನೀರು ಶುದ್ದೀಕರಿಸಿ ಕೋಲಾರ ಭಾಗಕ್ಕೆ ನೀಡ್ತಿರೋದನ್ನ ಪ್ರಶ್ನಿಸಿ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ದೇ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಧೀಕರಣವನ್ನ ಜುಲೈ 5ರ ಒಳಗಾಗಿ ರಚನೆ ಮಾಡಲು ಕೋರ್ಟ್ ಆದೇಶ ನೀಡಿದೆ.
ಈ ಕುರಿತು ಸ್ಪಷ್ಟನೆ ನೀಡಿರೊ ಡಿಸಿಎಂ ಡಿಕೆ ಶಿವಕುಮಾರ್, ದಿಲ್ಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನ ಭೇಟಿ ಮಾಡಿದ್ದೇನೆ. ನ್ಯಾಯಾಧೀಕರಣ ರಚನೆ ಬೇಡ. ಕೂತು ಸಮಸ್ಯೆ ಬಗೆಹರಿಸಿಕೊಳ್ಳೋಣ. ಇದೇ ವಿಚಾರಕ್ಕೆ ನಿತ್ಯ 2 ರಾಜ್ಯಗಳು ಕಿತ್ತಾಡೋದು ಬೇಡ ಅಂತ ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಅಂತ ಹೇಳಿದ್ದಾರೆ. ಜೊತೆಗೆ ಕೊಳಚೆ ನೀರು ಶುದ್ಧೀಕರಿಸಿ ಕೋಲಾರ ಸೇರಿ ಹಲವೆಡೆ ಕೆರೆ ತುಂಬಿಸುವ ಕೆಲಸ ಆಗ್ತಿದೆ. ಕೊಳಚೆ ನೀರು ಶುದ್ಧೀಕರಣದ ವಿಚಾರಕ್ಕೆ ಕೇಂದ್ರ ಸರ್ಕಾರವೂ ಅಭಿನಂದಿಸಿದೆ. ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿದೆ. ನಮ್ಮವರಿಗೇ ನೀರಿನ ಸಮಸ್ಯೆ ಎದುರಾಗಿದೆ. ಈ ವರ್ಷ ತಮಿಳುನಾಡಿಗೆ ನೀರು ಬಿಡಲು ಆಗಲ್ಲ. ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಆದ್ಯತೆ ವಹಿಸಲಾಗುತ್ತೆ ಅಂತ ಹೇಳಿದ್ದಾರೆ.
