
ನಿತ್ಯ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಮಗನನ್ನ ತಂದೆಯೇ ಕೈಕಾಲು ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುತ್ರ ಆದರ್ಶ್(28) ಮೃತ ವ್ಯಕ್ತಿ.
ಬೆಂಗಳೂರು ಗ್ರಾಮಾಂತರ: ನಿತ್ಯ ಕುಡಿದು ಬಂದು ಕಿರುಕುಳಕೊಡುತ್ತಿದ್ದ ಮಗನನ್ನ ತಂದೆಯೇ ಕೈಕಾಲು ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ದೊಡ್ಡಬಳ್ಳಾಪುರ( Doddaballapura ) ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುತ್ರ ಆದರ್ಶ್(28) ಮೃತ ವ್ಯಕ್ತಿ. ಆದರ್ಶ್ ದಿನವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇತ್ತೀಚೆಗೆ ತಾಯಿಯ ಬಳಿ ಹಣ ಕೇಳಿದಾಗ ಕೊಡಲಿಲ್ಲವೆಂದು ಆಕೆಯ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಬೇಸತ್ತಿದ್ದ ತಂದೆ ಜಯರಾಮಯ್ಯ ನಿನ್ನೆ ರಾತ್ರಿ ಮಗನ ಕೈಕಾಲು ಕಟ್ಟಿಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
