
ಸಕಲೇಶಪುರ : ಪಟ್ಟಣದ ಹೇಮಾವತಿ ಸೇತುವೆ ಪಕ್ಕದಲ್ಲಿ ಇರುವ ಪಾದಚಾರಿಗಳು ದಿನ ನಿತ್ಯ ತಿರುಗಾಡುವ ಕಬ್ಬಿಣದ ಸೇತುವೆಯ ಎಡಭಾಗದ ತಡೆಗೋಡೆ ಮುರಿದು ಬಿದ್ದಿದ್ದು , ಪಾದಚಾರಿಗಳು ತುಂಬ ಅಪಾಯದಿಂದ ತಿರುಗಾಡುವಂತಾಗಿದೆ.
ಪ್ರತಿದಿನ ನೂರಾರು ಪಾದಚಾರಿಗಳು ತಿರುಗಾಡುವ ಪಾದಚಾರಿಗಳು ಇದೀಗ ಮಳೆಗಾಲ ಆಗಿರುವುದರಿಂದ ಹೆಚ್ಚು ಪಾದಚಾರಿಗಳು ಅದೇ ರಸ್ತೆಯಲ್ಲಿ ಓಡಾಡುವುದರಿಂದ ರಾತ್ರಿ ವೇಳೆಯಲ್ಲಿ ಪಾದಚಾರಿಗಳು ಸಮತೋಲನ ತಪ್ಪಿ ಕೆಳಗೆ ಬಿದ್ದರೆ ಅನಾಹುತ ಆಗುವುದಂತು ಖಂಡಿತ ಕೂಡಲೇ ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಎಚ್ಚರಿಸಿದ್ದಾರೆ.
