ಪಾನ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ. ಈ ಹಿಂದೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಡ್ಡಾಯ ನಿಯಮವನ್ನು ಈಗಾಗಲೇ ಮಾಡಿ, ಮತ್ತೆ ಕೊನೆಯ ದಿನಾಂಕ ಜೂನ್ 30ರ ವರೆಗೆ ಮುಂದೂಡಲಾಗಿದೆ. ಆದರೆ, ಕೇಂದ್ರ ಸರ್ಕಾರವು ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ್ದು, ಪ್ರತಿಯೊಬ್ಬ ಆಧಾರ್ ಕಾರ್ಡ್ ಇದ್ದವರು ಹಾಗು ಪಾನ್ ಕಾರ್ಡ್ ಇದ್ದವರು ಕಡ್ಡಾಯವಾಗಿ ತಪ್ಪದೇ ತಿಳಿದುಕೊಳ್ಳಲೇಬೇಕಾದ ವಿಷಯವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅತ್ಯಂತ ಕಡ್ಡಾಯ ಎಂದು ಘೋಷಿಸಿದ್ದು, ಇದರ ದಿನಾಂಕವನ್ನ ಕೂಡ ಮುಂದೂಡಿ ಜೂನ್ 30 ಕ್ಕೆ ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದ್ದು,1000/- ದಂಡ ಕಟ್ಟಿ ಇದನ್ನ ಕಡ್ಡಾಯವಾಗಿ ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಇನ್ನು ಇದು ಉಳಿತಾಯ ಯೋಜನೆಗಳಿಗೂ ಕೂಡ ಕಡ್ಡಾಯ ಎನ್ನುವುದನ್ನ ಕೇಂದ್ರ ಸರ್ಕಾರ ಇತ್ತೀಚಿಗಷ್ಟೇ ಅಧೀಕೃತ ವರದಿಯನ್ನ ಹೊರ ಹಾಕಿದೆ ಸರಕಾರದ ಯೋಜನೆಗಳಿಗೆ ಪಾನ್ ಕಾರ್ಡ್ ಲಿಂಕ್, ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಅಂಚೆ ಕಚೇರಿ ಯೋಜನೆ ಸೇರಿದಂತೆ ಹಲವಾರು ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಅತ್ಯಂತ ಪ್ರಮುಖ ಹಾಗು ಕಡ್ಡಾಯ ಎನ್ನುವುದನ್ನ ಸ್ಪಷ್ಟೀಕರಿಸಲಾಗಿದೆ. ಮೊದಲು ಇಂತಹ ಯೋಜನೆಗಳಿಗಾಗಿ ಯಾವುದೇ ಆಧಾರ್ ಕಾರ್ಡ್ ನ್ನ ನೀಡುವ ಅಗತ್ಯವಿರಲಿಲ್ಲ. ಆದರೆ ಈಗ ಆಧಾರ್ ಕಾರ್ಡನ್ನ ನೀಡಲೇಬೇಕು, ಹಾಗು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹೂಡಿಕೆ ಮಾಡಿದರೆ ಅದಕ್ಕೆ ಪಾನ್ ಕಾರ್ಡ್ ಅನ್ನ ಕೂಡ ನೀಡಬೇಕಾಗುತ್ತದೆ. ಉಳಿತಾಯ ಖಾತೆಗಳಿಗೂ ಆಧಾರ್-ಪಾನ್ ಲಿಂಕ್ : ಸಣ್ಣ ಉಳಿತಾಯ ಖಾತೆಯ ಯೋಜನೆಯನ್ನ ತೆರೆಯುವಾಗ ಆಧಾರ್ ಸಂಖ್ಯೆಯನ್ನ ನೀಡಲೇಬೇಕಾಗುತ್ತದೆ. ಹಾಗು ಇದಕ್ಕೆ ಕೊನೆಯ ದಿನಾಂಕ ಸೆಪ್ಟೆಂಬರ್ 30 ಎನ್ನುವುದಾಗಿ ನಿರ್ಧರಿಸಲಾಗಿದೆ. ಪ್ರಮುಖವಾಗಿ ಖಾತೆ ತೆರೆದ ಆರು ತಿಂಗಳವರೆಗೆ ಈ ಕೆಲಸವನ್ನ ಮಾಡಲೇಬೇಕು. ಆಧಾರ್ ಸಂಖ್ಯೆ ಹಾಗು ಆಧಾರ್ ನೋಂದಣಿಯನ್ನ ಸೀಡಿಂಗ್ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಆರು ತಿಂಗಳೊಳಗೆ ಖಾತೆ ಸ್ಥಗಿತವಾಗುತ್ತದೆ. ಒಂದು ವೇಳೆ ಆಧಾರ್ ಸಂಖ್ಯೆಯನ್ನ ನೀಡಲು ವಿಫಲವಾದರೆ, ಅಕ್ಟೋಬರ್ 1 ರಿಂದ ಅವರ ಖಾತೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಆ ಖಾತೆಯಲ್ಲಿ 50,000/- ಮೀರಿದಾಗ, ಯಾವುದೇ ಹಣಕಾಸು ವರ್ಷದಲ್ಲಿ ಸಾಲದ ಮೊತ್ತ 1 ಲಕ್ಷ ಮೀರಿದಾಗ, ಆ ತಿಂಗಳಿನಲ್ಲಿ ರಿಟರ್ನ್ ಹಾಗು ಟ್ರಾನ್ಸಾಕ್ಷನ್ ಮೊತ್ತ 10,000/- ಮೀರಿದಾಗ, ಪಾನ್ ಕಾರ್ಡ್ ಅಗತ್ಯವಾಗಿ ಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಪಾನ್ ಕಾರ್ಡ್ ನಂಬರ್ ನೀಡಲು ವಿಫಲವಾದರೆ, ಪಾನ್ ಕಾರ್ಡ್ ನೀಡುವವರೆಗೂ ಕೂಡ ಖಾತೆ ನಿರ್ವಹಿಸುವುದನ್ನ ಸಂಪೂರ್ಣವಾಗಿ ನಿಲ್ಲಿಸಿ ಬಿಡಲಾಗುತ್ತದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *