ಸಕಲೇಶಪುರ.ಸಕಲೇಶಪುರ ತಾಲ್ಲೂಕು ಘಟಕದ ವತಿಯಿಂದ ಉಡುಪಿ ಜಿಲ್ಲೆ ನೇತ್ರ ಜ್ಯೊತಿ ಕಾಲೇಜಿನಲ್ಲಿ ಹಿಂದೂ ಹುಡಿಗಿಯರ ನಗ್ನ ವಿಡಿಯೋ ಪ್ರಕರಣದ ವಿರುದ್ಧ ಮತ್ತು ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ ಗಲಭೆ ಪ್ರಕರಣ NIA ತನಿಖಾ ತಂಡ ತನಿಖೆ ಮಾಡುತ್ತಿದ್ದು ಸರ್ಕಾರ ಹಸ್ತಕ್ಷೇಪ ಮಾಡಿ ಮುಸ್ಲಿಂ ತುಷ್ಟಿಕರಣ ಮಾಡಬಾರದು ಎಂದು ರಾಜ್ಯಪಾಲರಿಗೆ ಉಪವಿಭಾಗಾಧಿಕಾರಿ ಕಚೇರಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ನೇತ್ರ ಜ್ಯೊತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದೂ ಹೆಣ್ಣು ಮಕ್ಕಳ ನಗ್ನ ಚಿತ್ರವನ್ನ ಶೌಚಲಾಯದಲ್ಲಿ ಚಿತ್ರಿಕರಣ ಮಾಡಿ ಚಿತ್ರಗಳನ್ನು ಮುಸ್ಲಿಂ ಯುವಕರಿಗೆ ನೀಡಿ ಬ್ಲಾಕ್ ಮೇಲ್ ಮಾಡುವ ಕುತಂತ್ರ ಮಾಡುತಿದ್ದರು ಮುಸ್ಲಿಂ ಸಮುದಾಯಕ್ಕೆ ಸೇರಿದ ಅಲೀಮಾ,ಶಬ್ನ, ಶಫಾ ಎಂಬುವರು ಈ ಕೃತ್ಯ ಮಾಡಿದ ಮುಸ್ಲಿಂ ಹೆಣ್ಣುಮಕ್ಕಳ ವಿರುದ್ಧ ಯಾವದೇ ಕ್ರಮ ಜರುಗಿಸಿಲ್ಲ FIR ಮಾಡದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

3 ವಿದ್ಯಾರ್ಥಿಯನಿಯರು ಮತಾಂಧ ವಿದ್ಯಾರ್ಥಿ ಸಂಘಟನೆ ಜೊತೆ ಅಥವಾ ಬೇರೆ ಸಂಘಟನೆ ಜೊತೆ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಹಾಗೆ ಮೈಸೂರು ನರಸಿಂಮರಾಜ ಕ್ಷೇತ್ರ ಶಾಸಕ ತನ್ವಿರ್ ಸೇಠ್ ಸರ್ಕಾರಕ್ಕೆ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಒಂದು ಕೋಮಿನ ಯುವಕರನ್ನು ಗಲಭೆ ಪ್ರಕರಣದಿಂದ ಕೈ ಬಿಡಬೇಕು ಎಂದು ಪತ್ರ ಬರೆದಿರುವುದು ಇದು ತುಷ್ಟಿಕರಣದ ಪರಮಾವದಿ ಆಗಿದ್ದು. NIA ತನಿಖೆ ಮಾಡುತ್ತಿರುವಾಗ ರಾಜ್ಯಸರ್ಕಾರ ಮಧ್ಯಪ್ರವೇಶಿಸಿ ತನಿಖೆ ದಿಕ್ಕು ತಪ್ಪಿಸುವ ಹುನ್ನಾರ ಮಾಡುತ್ತಿದೆ.ರಾಜ್ಯಸರ್ಕಾರ ತನ್ನ ಗ್ಯಾರಂಟಿಗಳ ಪೂರ್ಣಮಾಡಲು ಆಗದ ಕಾರಣ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಜು ಕಬ್ಬಿನಗದ್ದೆ VHP ತಾಲ್ಲೂಕು ಕಾರ್ಯದರ್ಶಿ , ವಸಂತ್ ಹೆತ್ತೂರು ಹೋಬಳಿ ಸಂಯೋಜಕ, ವೀರೇಶ್ ಬೆಳಗೋಡು ಹೋಬಳಿ ಪ್ರಮುಖ್,ಸಚಿನ್, ಮಂಜು ಅಚಂಗಿ, ಲೋಹಿತ್ ಕೆಂಪೆನಾಹಲ್, ಪೂರ್ವಿಕ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *