ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರಿಯೂರು ಕೂಡಿಗೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಿಕೊಡಬೇಕಾಗಿ ಎಸ್. ಡಿ .ಎಮ್ .ಸಿ (SDMC) ಅಧ್ಯಕ್ಷರಾದ ಮಧು ಹೆಚ್.ಎಂ ಸೇರಿದಂತೆ ಎಸ್ ಡಿ ಎಂ ಸಿ ಸದಸ್ಯರು ಶಾಸಕರಾದ ಸಿಮೆಂಟ್ ಮಂಜಣ್ಣನವರಿಗೆ ಮನವಿ ಸಲ್ಲಿಸಲಾಯಿತು.

ಈ ಶಾಲೆಯು ಎರಡು ಕಟ್ಟಡಗಳನ್ನು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಅದನ್ನು ದುರಸ್ತಿ ಮಾಡಲು ಕೆಡುವಲಾಗಿತ್ತು. ಅಲ್ಲದೆ ಈಗ ಕೇವಲ ಒಂದೇ ಕಟ್ಟಡ ಮಾತ್ರ ಕಟ್ಟಲಾಗಿದೆ. ಈ ಶಾಲೆಯಲ್ಲಿ ಮೊದಲು 5ನೇ ತರಗತಿಯಿಂದ 7ನೇ ತರಗತಿಯವರೆಗೆ ತರಗತಿಗಳನ್ನು ನಡೆಸಲಾಗುತ್ತಿತ್ತು. ಕಳೆದೆರಡು ವರ್ಷಗಳಲ್ಲಿ ಈ ಶಾಲೆಯನ್ನು 1ನೇ ತರಗತಿಯಿಂದ 7 ನೇ ತರಗತಿಯ ನಡೆಸುವಂತೆ ವಿಸ್ತರಿಸಲಾಯಿತು. ಈಗ ಕೇವಲ ಒಂದೇ ಕೊಠಡಿ ಇದ್ದು ಎಲ್ಲಾ ತರಗತಿಯ ಮಕ್ಕಳಿಗೆ ಅಲ್ಲೇ ವಿದ್ಯಾಭ್ಯಾಸ ಕಲಿಸಬೇಕಾದ ಸಂದರ್ಭ ಬಂದಿದೆ. ಹಾಗಾಗಿ ಈ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಬೇರೆ ಕಡೆಗೆ ಶಾಲೆಗೆ ಕಳುಹಿಸುವ ಕೆಲಸ ಮಾಡಿದ್ದಾರೆ ಮಾಡುತ್ತಿದ್ದಾರೆ.

ಈ ಅವ್ಯವಸ್ಥೆಯ ಪರಿಣಾಮದಿಂದಾಗಿ ಮಾದರಿ ಶಾಲೆ ಏನಿಸಿಕೊಂಡಿದ್ದ ಈ ಶಾಲೆಯಲ್ಲಿ ಈಗ ಕೇವಲ 23 ವಿದ್ಯಾರ್ಥಿಗಳಷ್ಟೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೂತನ ಕಟ್ಟಡವನ್ನು ಮಾಡಿಕೊಡುವ ಜೊತೆಗೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಒಳ್ಳೆಯ ರೀತಿ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಶಾಸಕರರಿಗೆ ಮನವಿಯನ್ನು ಸಲ್ಲಿಸಲಾಯಿತು.ಸಮಸ್ಯೆಯನ್ನು ಆಲಿಸಿದ ಶಾಸಕರಾದ ಸಿಮೆಂಟ್ ಮಂಜಣ್ಣನವರು ಸರ್ಕಾರಿ ಶಾಲೆಗಳು ಉಳಿಯಬೇಕು . ಈ ಕೆಲಸವನ್ನು ಕೂಡಲೇ ಮಾಡಿಕೊಡಲು ಮನಸ್ಸು ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ನೂತನ ಕಟ್ಟಡಕ್ಕೆ ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಎಸ್ .ಡಿ .ಎಮ್. ಸಿ ಸದಸ್ಯರುಗಳಾದ ನಂದಕುಮಾರ್, ಹರೀಶ್, ವಿನೋದ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *