ಸಕಲೇಶಪುರ : ಹಾನು ಬಾಳುವಿನ ಅಚ್ಚನ ಹಳ್ಳಿ ಗ್ರಾಮದ ಡೈಸಿ ಸ್ಟೀಫನ್ ರವರ ಜಾಗವನ್ನು ಅರಣ್ಯ ಇಲಾಖೆ ತೆರವು ಮಾಡದಂತೆ ರಾಜ್ಯದ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ.

ಕೆಲವು ದಿನಗಳ ಹಿಂದೆ ಅರಣ್ಯಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಸ್ಟೋನ್ ವ್ಯಾಲಿ ರೆಸಾರ್ಟ್ ಮಾಡಲಾಗಿದೆ ಎಂದು ಸ್ಥಳೀಯ ಅರಣ್ಯ ಇಲಾಖೆಯು ರೆಸಾರ್ಟ್‌ ಗೆ ಬೀಗ ಹಾಕುವ ಮೂಲಕ ಬಂದ್ ಮಾಡಿತ್ತು

ಇದೀಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಆದೇಶ ಮಾಡಿರುವ ರಾಜ್ಯದ ಹೈ ಕೋರ್ಟ್ ಹಾನುಬಾಳು ಸರ್ವೇ ನಂ 95, 92, 148, 148/1, 148/2ಗೆ ಯಾವುದೇ ತಡೆ ಮಾಡದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದೆ.

ಅರಣ್ಯ ಇಲಾಖೆ ಕಳೆದ ಕೆಲವು ದಿನಗಳ ಹಿಂದೆ ಇವರನ್ನು ಅಲ್ಲಿಂದ ತೆರವು ಗೊಳಿಸಿತ್ತು. ಬಳಿಕ ಸ್ಟೋನ್ ವ್ಯಾಲಿ ರೆಸಾರ್ಟ್, ಅವರ ಮನೆ ಸೇರಿದಂತೆ ಎಲ್ಲಾ ಸ್ವತ್ತುಗಳಿಗೂ ಬೀಗ ಹಾಕಿತ್ತು.ಅರಣ್ಯ ಇಲಾಖೆಯ ಈ ಕ್ರಮವನ್ನು ಪ್ರಶ್ನಿಸಿ ಅವರು ಹೈ ಕೋರ್ಟ್ ಮೆಟ್ಟಲು ಏರಿದ್ದರು.ಒಟ್ಟಿನಲ್ಲಿ ತಾತ್ಕಾಲಿಕವಾಗಿ ಸ್ಟೋನ್ ವ್ಯಾಲಿ ರೆಸಾರ್ಟ್‌ ಗೆ ರಿಲೀಫ್ ನೀಡಿದ್ದು ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯವರು ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಕೋರ್ಟ್‌ ಗೆ ಮಾಹಿತಿ ನೀಡಬೇಕಾಗಿದ್ದು ಮುಂದೇನು ಎಂಬುದನ್ನು ಕಾದು ನೋಡಬೇಕಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *