
ಸಕಲೇಶಪುರ:- ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಬೊಬ್ಬನಹಳ್ಳಿ ಗ್ರಾಮದ ಸುರೇಂದ್ರ ಅವರ ಮನೆಯ ಮೇಲೆ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಒಂಟಿ ಆನೆ ದಾಳಿ ಮಾಡಿ, ಬೈಕ್ ನಿಲ್ಲಿಸಲು ಮಾಡಿದ್ದ ಸೆಡ್ಡಿನ ಶೀಟ್ ಗಳನ್ನು ಎಳೆದು ಕಂಬಗಳನ್ನು ಮುರಿದು ಬೈಕನ್ನು ಜಖಂ ಗೊಳಿಸಿದೆ.
ಕಳೆದ 15 ದಿನಗಳಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು. ಅವುಗಳು ತೋಟ ಗದ್ದೆಗಳಲ್ಲಿ ಬೆಳೆದ ಬೆಳೆಗಳನ್ನು ಹಾನಿ ಮಾಡುತ್ತಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಊರಿನ ಒಳಗೆ ಬಂದು ಮನೆಗಳ ಮೇಲೆ ಹಾನಿ ಮಾಡುತ್ತಿದ್ದಾವೆ.
ಘಟನಾ ಸ್ಥಳಕ್ಕೆ ಯಸಳೂರು ಅರಣ್ಯ ಅಧಿಕಾರಿಗಳಾದ ಜಗದೀಶ್ ಭೇಟಿ ಮಾಡಿದರು. ಹಾನಿಗೊಳಗಾದವರಿಗೆ ಶೀಘ್ರವಾಗಿ ಪರಿಹಾರ ಕಲ್ಪಿಸಿಕೊಡುವ ಕೆಲಸ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರು.





