ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಕೂಡುರಸ್ತೆ ಮಧ್ಯ ಏಕ ರೆಸಾರ್ಟ್ ಹತ್ತಿರ ಜೋರು ಮಳೆ ಗಾಳಿಗೆ ಮರ ಬಿದ್ದು ಸುಮಾರು 15 ದಿನ ಕಳೆದರೂ ಸಹ ಮರವನ್ನು ತೆರವುಗೊಳಿಸದೇ ಇರುವುದರಿಂದ ವಾಹನ ಸವಾರರು ಪರದಾಡ ಬೇಕಾಗಿದೆ.

ರಸ್ತೆ ಅರ್ಧ ಭಾಗ ಬಿದ್ದಿರುವ ಮರ ಹಾಗೆ ಇದ್ದು ಒಂದು ವಾಹನ ಸಂಚರಿಸುವಷ್ಟು ಮಾತ್ರ ರಸ್ತೆ ಇದ್ದು ವಾಹನಗಳು ಎದುರು ಬದುರಾದಾಗ ಆಫಘಾತ ಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಕಣ್ಣಿಗೆ ಇಷ್ಟು ದಿನಗಳಾದರೂ ಬೀಳದಿರುವುದು ಆಶ್ಚರ್ಯ. ಆದಷ್ಟು ಬೇಗ ಮರವನ್ನು ತೆರವು ಗೊಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *