ಹೆತ್ತೂರು : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಸನ ಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು.

ಡಾ.ಮಹಂತ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ ಇದನ್ನು ನಡೆಸಲಾಯಿತು.

ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಅಭಿಜಿತ್ ಈ.ಎಸ್. ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.

ವಿವಿಧ ವ್ಯಸನಗಳ ದಾಸ್ಯದಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು. ಬಳಿಕ ವಿಶ್ವ ಸ್ಕೌಟ್ಸ್ ಸೂರ್ಯೋದಯ ದಿನ ಮತ್ತು ಸ್ಕಾರ್ಫ್ ದಿನದ ಪ್ರಯುಕ್ತ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಸ್ಕಾರ್ಫ್ ಧಾರಣೆ ಮಾಡಿದರು.

ಪ್ರಾಂಶುಪಾಲ ಮತ್ತು ರೋವರ್ ಸ್ಕೌಟ್ಸ್ ಲೀಡರ್ ಮಂಜುನಾಥ ಬಿ.ಡಿ. ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಪ್ರತಿಜ್ಞೆ ಬೋಧಿಸಿದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *