ಸಕಲೇಶಪುರ : ತಾಲ್ಲೂಕಿನಹೆತ್ತೂರು ಹೋಬಳಿಯ ವಳಲಹಳ್ಳಿ, ಜಾತಹಳ್ಳಿ , ಬೊಬ್ಬನಹಳ್ಳಿ, ಚಿನ್ನಹಳ್ಳಿ, ಹೊಸಹಳ್ಳಿ ಸೇರಿದಂತೆ ಐದಾರು ಹಳ್ಳಿಯ ಜನರು ಪ್ರತಿದಿನ ತಮ್ಮ ತೋಟದಲ್ಲಿ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಕಳೆದ 2 ದಿನಗಳ ಹಿಂದೆ ಹೊಸಹಳ್ಳಿ ಲಲಿತಮ್ಮ ರವರ ಮನೆಯ ಶೀಟ್, ಹಾಗೂ ಟಿ.ವಿ.ನೋಡಲು ಅಳವಡಿಸಿದ್ದ ಡಿಶ್ ಮುರಿದು ಹಾಕಿದ ಕಾಡಾನೆಗಳು ಹಾಗೆ ರಮೇಶ್ ಅವರ ಮನೆಯ ಕಾಂಪೌಂಡ್ ಹಾಗೂ ಗೇಟುಗಳನ್ನು ಮುರಿದು ಹಾಕಿ ಮನೆಯ ಮಾಲೀಕರಿಗೆ ನಷ್ಟ ಉಂಟು ಮಾಡಿವೆ.

ಇಂದು ಬೆಳಿಗ್ಗೆ ರಂಜೇಶ್ ರವರು ಗದ್ದೆಯ ಹತ್ತಿರ ಬಂದು ನೋಡಿದಾಗ ಅತಂಕವಾಗಿದೆ ಕಾಡಾನೆಗಳ ಹಿಂಡು ಗದ್ದೆಯಲ್ಲಿ ಹೊಸದಾಗಿ ನಾಟಿ ಮಾಡಿದ್ದ ಗದ್ದೆಯನ್ನು ಸಂಪೂರ್ಣ ವಾಗಿ ಹಾಳು ಮಾಡಿರುವುದು ಕಂಡುಬಂದಿದೆ ಇದರ ಜೊತೆಗೆ ಕಾಫಿ ತೋಟದಲ್ಲಿ ಬೆಳೆದ ಬಾಳೆ, ಬೈನೆ, ಅಡಿಕೆ ಮರಗಳನ್ನು ನಾಶ ಮಾಡುತ್ತಿವೆ.ಹಾಗೂ ಪುಟ್ಟಪ್ಪನವರ ಒಣ ಹುಲ್ಲಿನ ರಾಶಿಯನ್ನು ಎಳೆದಾಡಿ ಕಾಡಾನೆಗಳು ನಾಶ ಮಾಡಿವೆ.

ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹಾನಿಗೆ ಒಳಗಾದ ಬೆಳೆಗಳಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *